ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ತಾಳಮದ್ದಳೆ ಸೇವೆಯ ಆರಂಭ

0

ಅಲಂಕಾರು: ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದುರ್ಗಾಂಬಾ ಕಲಾಸಂಗಮ ಶರವೂರು ಇದರ ಆಶ್ರಯದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಭಕ್ತರ
ಇಷ್ಟಾರ್ಥ ಸಿದ್ಧಿಗಾಗಿ ಯಕ್ಷಗಾನ ತಾಳಮದ್ದಳೆ ಸೇವೆಯನ್ನು ಶ್ರೀ ದೇವಿ ಸನ್ನಿದಿಯಲ್ಲಿ ದೇವಸ್ಥಾನದ ಅರ್ಚಕರಾದ ಹರಿಪ್ರಸಾದ್ ಉಪಧ್ಯಾಯ ಮತ್ತು ರಾಘವೇಂದ್ರ ಪ್ರಸಾದ ಭಟ್ ದೀಪೋಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆ ಬಳಿಕ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ದೇವಿಗೆ ಇಷ್ಟವಾದ ಯಕ್ಷಗಾನ ಸೇವೆ ಹಿಂದಿನಿಂದಲೂ ನಡೆಯುತ್ತಿದ್ದು ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಆರಂಭಿಸಲ್ಪಡುತ್ತಿರುವ ತಾಳಮದ್ದಳೆಯು ನಿರಂತರವಾಗಿ ಭಕ್ತರ ಸಹಕಾರದೊಂದಿಗೆ ನಡೆಯಲಿ ಇದಕ್ಕೆ ಶ್ರೀ ದೇವಿಯ ಪೂರ್ಣ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ್ ಕುಂಬ್ಳೆ ,ಉಪ್ಪಿನಂಗಡಿ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯ ಶುಭ ಹಾರೈಸಿದರು.

ದೇವಳದ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆ, ಕಲಾಸಂಗಮದ ಅಧ್ಯಕ್ಷ ಚಂದ್ರ ದೇವಾಡಿಗ ನಗ್ರಿ, ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದು ಶುಭಾಹಾರೈಸಿದರು.

ಸೇವಾ ರೂಪದ ಶ್ರೀದೇವಿ ಕೌಶಿಕೆ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಗೋಪಾಲ ಭಟ್ ನೈಮಿಷ, ಡಿ.ಕೆ. ಆಚಾರ್ಯ ಹಳೆನೇರೆಂಕಿ, ಹಿಮ್ಮೆಳದಲ್ಲಿ ಬಾಲಸುಬ್ರಹ್ಮಣ್ಯ ಭಟ್, ಚಂದ್ರ ದೇವಾಡಿಗ ನಗ್ರಿ, ಶ್ರೀಪತಿ ಭಟ್ ಉಪ್ಪಿನಂಗಡಿ ಅರ್ಥದಾರಿಗಳಾಗಿ ಗಣರಾಜ ಕುಂಬ್ಳೆ,ದಿವಾಕರ ಆಚಾರ್ಯ ಗೇರುಕಟ್ಟೆ, ದಿವಾಕರ ಆಚಾರ್ಯ ಹಳೆನೇರೆಂಕಿ, ಗುಡ್ಡಪ್ಪ ಬಲ್, ಗುರುಪ್ರಸಾದ್ ಆಲಂಕಾರು,ರಾಮ್ ಪ್ರಸಾದ್ ಆಲಂಕಾರು, ರಾಮ್ ಪ್ರಕಾಶ್ ಕೊಡಂಗೆ, ಜಯರಾಮ್ ಗೌಡ ಬಲ್ಯ , ರಾಘವೇಂದ್ರ ಪ್ರಸಾದ್ ಭಟ್, ನಾರಾಯಣ ಭಟ್ ಆಲಂಕಾರು,ಬಾಲಕೃಷ್ಣ ಕೇಪುಳು,ಭಾಗವಹಿಸಿದ್ದರು.ದುರ್ಗಾಂಬಾ ಕಲಾ ಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಹಳೆನೇರೆಂಕಿ ಸ್ವಾಗತಿಸಿ , ಸಂಗಮದ ಕೋಶಾಧಿಕಾರಿ ಶ್ಯಾಮ್ ಪ್ರಸಾದ್ ವಂದಿಸಿದರು. ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.ಯಕ್ಷಗಾನ ತಾಳಮದ್ದಳೆ ಸೇವಾಕರ್ತರಾದ ಹರಿಪ್ರಸಾದ್ ಉಪಾಧ್ಯಾಯ, ರಾಘವೇಂದ್ರ ಪ್ರಸಾದ್ ಭಟ್, ಚಂದ್ರ ದೇವಾಡಿಗ ನಗ್ರಿ, ಸುಂದರ ಗೌಡ ನೆಕ್ಕಿಲಾಡಿ, ಡಿ.ಕೆ.ಆಚಾರ್ಯ ಹಳೆನೇರೆಂಕಿ,ಸೇಸಪ್ಪ ಪೂಜಾರಿ ಕೇಪುಳು ಇವರಿಗೆ ಸೇವಾ ರೂಪದ ಪ್ರಸಾದವನ್ನು ಶ್ರೀದೇವಿಯ ಸನ್ನಿಧಿಯಲ್ಲಿ ನೀಡಲಾಯಿತು.ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಶ್ರೀ ದುರ್ಗಾಂಬಾ ಕಲಾ ಸಂಗಮದ ಪದಾಧಿಕಾರಿಗಳು, ಸದಸ್ಯರು, ದೇವಸ್ಥಾನದ ಆರ್ಚಕರು ,ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here