ಬೊಳ್ವಾರು ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಪ್ರತಿಷ್ಠಾನದಿಂದ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳ್ವಾರು ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ  ಪ್ರತಿಷ್ಠಾನದ ವತಿಯಿಂದ ಜರಗುವ ತಿಂಗಳ ಕೂಟದಲ್ಲಿ ಮಾ.9 ರಂದು ಅಪರಾಹ್ನ ʼ ಗದಾಯುದ್ಧʼ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು.

ಹಿಮ್ಮೇಳದಲ್ಲಿ ಭಾಗತರಾಗಿ ಶ್ರೀಪತಿ ನಾಯಕ್ ಅಜೇರು, ಗೋವಿಂದ ನಾಯಕ್ ಪಾಲೇಚರ್, ಚೆಂಡೆ ಮದ್ದಳೆ ವಾದಕರಾಗಿ ಹಿರಿಯ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ  ಮುರಳೀಧರ್ ಕಲ್ಲೂರಾಯ ಮತ್ತು ಪ್ರತಿಷ್ಠಾನದ ಶಿಷ್ಯವರ್ಗ ಸಹಕರಿಸಿದರು. ಮುಮ್ಮೇಳದಲ್ಲಿ ಭೀಮನಾಗಿ ಗುಡ್ಡಪ್ಪ ಬಲ್ಯ, ಕೌರವನಾಗಿ ಗುಂಡ್ಯಡ್ಕ ಈಶ್ವರ ಭಟ್, ಸಂಜಯನಾಗಿ ಭಾಸ್ಕರ ಶೆಟ್ಟಿ, ಅಶ್ವತ್ಥಾಮನಾಗಿ ಜಗನ್ನಾಥ್ ಪುಣಚ, ಬೇಹಿನ ಚರರುಗಳಾಗಿ ಧನುಷ್ ಮತ್ತು ಮಿಹಿರ, ಧರ್ಮರಾಯನಾಗಿ ಶಂಕರ್ ಸಾರಡ್ಕ, ಕೃಷ್ಣನಾಗಿ ಕೇಶವ ಭಟ್ ಕೆಕನಾಜೆ, ಬಲರಾಮನಾಗಿ ಪ್ರಸನ್ನ ಬಲ್ಲಾಳ್ ರವರು ಅಭಿನಯಿಸಿದರು. ಕೂಟದ ಪ್ರಾಯೋಜಕತ್ವವನ್ನು ಹಿಮ್ಮೇಳ ವಿದ್ಯಾರ್ಥಿ ಕು.ಧ್ರುವನ ಹೆತ್ತವರಾದ ಸುರೇಶ್ ವಿನಯಶ್ರಿ ದಂಪತಿ ವಹಿಸಿದ್ದರು. ಪ್ರತಿಷ್ಠಾನದ ಆಡಳಿತ ಮಂಡಳಿ ಅಧ್ಯಕ್ಷ ಬಾಲ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಶಂಕರ ಭಟ್, ಸದಸ್ಯರಾದ ವಸಂತ ನಾಯಕ್, ಅನಂತ್ ಭಟ್, ಬಾಲಸುಬ್ರಹ್ಮಣ್ಯ ಭಟ್, ರಾಮ ಸೇರಿದಂತೆ 40ಕ್ಕೂ ಮಿಕ್ಕಿ ಕಲಾಭಿಮಾನಿಗಳು ಉಪಸ್ಥಿತರಿದ್ದರು. ನೆರೆದಂತಹ ಹಿಮ್ಮೇಳ , ಮುಮ್ಮೇಳ ಹಾಗೂ ಕಲಾಭಿಮಾನಿಗನ್ನು ನಾಟ್ಯ ತರಗತಿ ಸಂಯೋಜಕ ರಾಮ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here