ಇಂದಿನ ಕಾರ್ಯಕ್ರಮ (11/03/2025)

0

ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸರ್ಪಸಂಸ್ಕಾರ
ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಬೆಳಿಗ್ಗೆ ೧ರಿಂದ ಪುತ್ತೂರು ತಾ| ಮಹಿಳಾ ಬಂಟರ ಸಂಘದ ಸಾರಥ್ಯದಲ್ಲಿ ಮಹಿಳಾ ದಿನಾಚರಣೆ, ೧೧.೩೦ರಿಂದ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಅಪರಾಹ್ನ ೨.೩೦ರಿಂದ ಮಹಿಷಮರ್ದಿನಿ ಯಕ್ಷಗಾನ
ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್
ಪುತ್ತೂರು ರಾಧಾಕೃಷ್ಣ ಬಿಲ್ಡಿಂಗ್ ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಬೆಳಿಗ್ಗೆ ೯ರಿಂದ ಉಚಿತ ನೇತ್ರ ತಪಾಸಣಾ ಶಿಬಿರ
ಆರ್ಯಾಪು ಸಂಪ್ಯ ದಂಬೆತ್ತಿಮಾರ್‍ದ ಮಾಯ್ಕಾರೆ ಅಜ್ಜೆ ಶ್ರೀ ಕೊರಗತನಿಯ ಕ್ಷೇತ್ರದಲ್ಲಿ ಬೆಳಿಗ್ಗೆ ೮ರಿಂದ ಶ್ರೀ ಕೊರಗ ತನಿಯ ದೈವದ ನೇಮೋತ್ಸವ, ಮಧ್ಯಾಹ್ನ ೧ರಿಂದ ಸಾರ್ವಜನಿಕ ಅನ್ನಸಂತರ್ಪಣೆ
ನೆಹರುನಗರ ಮಂಗಲ್ ಸ್ಟೋರ್ ಬಳಿ ನೆಕ್ಸಾ ಭಾರತ್ಆಟೋ ಕಾರ್‍ಸ್‌ನಿಂದ ನೆಕ್ಸಾ ಗ್ರಾಮೀಣ ಮಹೋತ್ಸವ
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೧೦ರಿಂದ ಪಂಚಗ್ಯಾರಂಟಿ ಯೋಜನೆ ನೋಂದಾವಣೆ ಶಿಬಿರ
ಬಡಗನ್ನೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ಬಡಗನ್ನೂರು ೩ನೇ, ಪಡುವನ್ನೂರು ೩ನೇ ವಾರ್ಡ್, ತುಳಸಿಯಡ್ಕ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ ೩ಕ್ಕೆ ಬಡಗನ್ನೂರು ೧, ೨ನೇ ವಾರ್ಡ್‌ನ ವಾರ್ಡುಸಭೆ
ಕಜೆಕ್ಕಾರು ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಉಪ್ಪಿನಂಗಡಿ ಗ್ರಾ.ಪಂ ೪ನೇ ವಾರ್ಡ್, ೧೧ಕ್ಕೆ ೫ನೇ ವಾರ್ಡ್, ಹಿರ್ತಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೩ಕ್ಕೆ ೬ನೇ ವಾರ್ಡ್‌ನ ವಾರ್ಡುಸಭೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ ೭.೩೦ಕ್ಕೆ ಧ್ವಜಾರೋಹಣ, ಸಂಜೆ ೭ರಿಂದ ಉತ್ಸವ
ಕೆಮ್ಮಾಯಿ ಶ್ರೀ ಮಹಾವಿಷುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಮಹಾಗಣಪತಿ ಹೋಮ, ಕಲಶಾಭಿಷೇಕ, ಸೀಯಾಳಾಭಿಷೇಕ, ಪವಮಾನಾಭಿಷೇಕ, ಶ್ರೀ ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ಮಧ್ಯಾಹ್ನ ೧೨ರಿಂದ ಮಹಾಪೂಜೆ, ಸಂಜೆ ೭ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
ಕಾವು ನನ್ಯ ಶ್ರೀ ದಂಡನಾಯಕ ದೈವಸ್ಥಾನದಲ್ಲಿ ಸಂಜೆ ೭ರಿಂದ ಪುಣ್ಯಾಹವಾಚನ, ಸ್ಥಳಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಮಾತೃ ಪೂಜನ ಕಾರ್ಯಕ್ರಮ, ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ
ಎರುಂಬು ಸಿಂಹಮೂಲೆ ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಬೆಳಿಗ್ಗೆ ೮.೩೦ರಿಂದ ಭಜನೆ, ೧೦.೩೦ರಿಂದ ಭಕ್ತಿನಿನಾದ-ರಸಮಂಜರಿ, ಮಧ್ಯಾಹ್ನ ೨ರಿಂದ ಸಿಂಗಾರಿ ಮೇಳ, ಸಾಂಸ್ಕೃತಿಕ ಕಲಾ ವೈಭವ, ಸಂಜೆ ೪.೩೦ರಿಂದ ತಂತ್ರಿಗಳ ಆಗಮನ, ದೇವತಾ ಪ್ರತಿಷ್ಠೆ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಸಂಜೆ ೫ರಿಂದ ಧಾರ್ಮಿಕ ಪ್ರವಚನ, ೬.೩೦ರಿಂಸ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ ೮ರಿಂದ ಒರಿಯಾಂಡಲಾ ಸರಿ ಬೋಡು ತುಳು ನಾಟಕ

LEAVE A REPLY

Please enter your comment!
Please enter your name here