ಲಿಟ್ಲ್ ಫ್ಲವರ್ ಶಾಲೆಯಲ್ಲಿ ಮೇಳೈಸಿದ ಸ್ಕೌಟ್ಸ್, ಗೈಡ್ಸ್ ಕಬ್ ಮತ್ತು ಬುಲ್ ಬುಲ್ ವಾರ್ಷಿಕ ಮೇಳ

0

ಪುತ್ತೂರು: ಶತಮಾನದ ಹೊಸ್ತಿಲಲ್ಲಿರುವ ದರ್ಬೆ ಲಿಟ್ಲ್ ಫ್ಲವರ್ ಹಿ ಪ್ರಾ ಶಾಲೆಯಲ್ಲಿ ಎರಡು ದಿನಗಳ ಕಾಲ ಹಲವು ವಿಭಿನ್ನ, ವಿನೂತನ ಶೈಲಿಯಲ್ಲಿ ನಡೆದ ಶಾಲಾ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ವಾರ್ಷಿಕ ಮೇಳವು ಮೇಳೈಸಿದೆ.

ಮೇಳದ ಪ್ರಥಮ ದಿನ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ. ಎಸ್ ಅಧ್ಯಕ್ಷೆತೆಯಲ್ಲಿ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ನಂತರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಗರ ಸಭೆಯ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಎಲ್. ಟಿ., ಪದವೀಧರೆ ಗೈಡ್ಸ್ ಕ್ಯಾಪ್ಟನ್ ಸುನಿತಾ, ಕೋಸ್ಟಲ್ ಹೋಮ್ ಮಾಲಕ ಸಂದೇಶ್ ರೈ ಸಂಪ್ಯ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಯಸ್, ಗೈಡ್ಸ್ ಕ್ಯಾಪ್ಟನ್ ವಿಲ್ಮಾ ಫೆರ್ನಾಂಡಿಸ್, ಮೇಳದ ನಾಯಕ ಸ್ಕೌಟರ್ ಬಾಲಕೃಷ್ಣ ಪೊರ್ದಾಲ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ರಂಗ ನಿರ್ದೇಶಕ ಉದಯ ಸಾರಂಗ್‌ರವರಿಂದ ಅಭಿನಯ ಗೀತೆ, ಥಿಯೆಟರ್ ಗೇಮ್ಸ್ ಹಾಗೂ ಮನೋರಂಜನಾತ್ಮಕ ಆಟಗಳು ನೇರವೇರಿತು. ಮಧ್ಯಾಹ್ನದ ಬಳಿಕ ಸ್ಕೌಟ್ ವಿದ್ಯಾರ್ಥಿಗಳಿಂದ ಗೂಡು ದೀಪ ರಚನೆ, ಗೈಡ್ಸ್ ವಿದ್ಯಾರ್ಥಿಗಳಿಂದ ನಕ್ಷತ್ರ ರಚನೆ, ಕಬ್ ವಿದ್ಯಾರ್ಥಿಗಳಿಂದ ರಾಷ್ರಧ್ವಜ ರಚನೆ, ಬುಲ್ ಬುಲ್ ವಿದ್ಯಾರ್ಥಿಗಳಿಂದ ಎಲೆಗಳಿಂದ ಆಕೃತಿ ತಯಾರಿ, ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳಿಂದ ಬೆಂಕಿ ಬಳಸದ ಅಡುಗೆ ತಯಾರಿ ನಡೆಯಿತು.


ಸಂಜೆ 350 ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯನ್ನು ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್ ಉದ್ಘಾಟಿಸಿದರು. ದರ್ಬೆ ವೃತ್ತದಿಂದ ಹೊರಟ ಮೆರವಣಿಗೆಯು ಚೆಂಡೆ ವಾದ್ಯ ಘೋಷಣೆಗಳೊಂದಿಗೆ ಆಕರ್ಷಕವಾಗಿ ಸಾಗಿ ಬಂದಿತು. ಶಾಲಾ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ಮಕ್ಕಳಿಂದ ರಸಮಂಜರಿ, ಸಂಜೆಯ ಶಿಬಿರಾಗ್ನಿ ಕಾರ್ಯಕ್ರಮ ನಡೆಯಿತು. ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ. ಎಸ್ ಅಧ್ಯಕ್ಷೆತೆ ವಹಿಸಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರಸಭೆಯ ಪೌರಾಯುಕ್ತ ಮಧು ಎಸ್ ಮನೋಹರ್, ಸ್ಕೌಟ್, ಗೈಡ್ , ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಆರ್. ಗೌರಿ, ಹಿರಿಯ ವಿದ್ಯಾರ್ಥಿ, ಖ್ಯಾತ ವೈದ್ಯ ಸೀತಾರಾಮ ಭಟ್ ಕಲ್ಲಮ, ಸ್ಕೌಟ್, ಗೈಡ್, ರಾಜ್ಯ ಸಂಘಟನಾ ಆಯುಕ್ತ ಭರತ್ ರಾಜ್, ಗೈಡರ್ ಪಾಪೆಮಜಲು ಶಾಲೆಯ ಶಿಕ್ಷಕಿ ಮೇಬಲ್ ಡಿ’ಸೋಜ, ನಿವೃತ್ತ ಶಿಕ್ಷಕ ಶ್ರೀನಿವಾಸ್ ಬಿ, ಹಿಮಾಲಯ ವುಡ್ ಬ್ಯಾಚ್, ಪರಿವೀಧರೆ ಬೆಥನಿ ಸಂಸ್ಥೆಯ ಶಿಕ್ಷಕಿ ಮೈತ್ರಿ, ನಿವೃತ್ತ ಗೈಡ್ ಶಿಕ್ಷಕಿ ಡೋರತಿ ಮೇರಿ ಡಿಸೋಜ, ಹಿರಿಯ ವಿದ್ಯಾರ್ಥಿ, ದಂತ ವೈದ್ಯ ಡಾ. ಶ್ರೀ ಪ್ರಕಾಶ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ರಾಷ್ಟ್ರಮಟ್ಟದ ಪ್ರತಿಭೆ ಹಿರಿಯ ವಿದ್ಯಾರ್ಥಿನಿ ಪ್ರಾರ್ಥನಾ ಬಿ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಯಸ್, ಬೆಥನಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಸೆಲಿನ್ ಪೇತ್ರ , ಬ್ಯಾಂಕ್ ಆಫ್ ಬರೋಡಾದ ಪ್ರಬಂಧಕಿ ಮಮತಾ ಶ್ರೀವಾಸ್ತವ್, ಗೈಡ್ಸ್ ಕ್ಯಾಪ್ಟನ್ ವಿಲ್ಮಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಸನ್ಮಾನ:
ಮಧ್ಯಪ್ರದೇಶದ ಬೋಪಾಲ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಪ್ರಾರ್ಥನಾ ಬಿಯವರನ್ನು ಸನ್ಮಾನಿಸಲಾಯಿತು. ಹಿಮಾಲಯ ವುಡ್ ಬ್ಯಾಚ್ ಪದವೀಧರೆ ಬೆಥನಿ ಸಂಸ್ಥೆಯ ಶಿಕ್ಷಕಿ ಮೈತ್ರಿರವರನ್ನು ಗೌರವಿಸಲಾಯಿತು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಶಾಲಾ ಗೈಡ್ಸ್ ವಿದ್ಯಾರ್ಥಿನಿಯರಿಂದ ಅತ್ಯಾಕರ್ಷಕ ಬೇಡರ ನೃತ್ಯ, ಜೂಲೊಗಳ ಆಗಮನಕ್ಕೆ ಪ್ರೇಕ್ಷಕರ ಹರ್ಷೋದ್ಗಾರದೊಂದಿಗೆ ಶಿಬಿರಾಗ್ನಿಯನ್ನು ತಹಶೀಲ್ದಾರ್ ಪುರಂದರ ಹೆಗ್ಡೆ ಉದ್ಘಾಟಿಸಿದರು. ನಂತರ 350 ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕ ಶಿಕ್ಷಕಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಸಂಜೆ ವಿಶೇಷವಾಗಿ ನಡೆದ ಶಿಬಿರಾಗ್ನಿ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಳಿಸಿತು.


ಎರಡನೇಯ ದಿನ ಬೆಳಿಗ್ಗೆ ಬಿ.ಪಿ.ಸಿಕ್ಸ್ ವ್ಯಾಯಾಮ ನಡೆದು ಸರ್ವ ದರ್ಮ ಪ್ರಾರ್ಥನೆ, ಉಪಹಾರ ನಡೆದು ವರ್ಣಕುಟೀರಾ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ರವರಿಂದ ಕ್ರಾಪ್ಟ್ ತಯಾರಿ ತರಬೇತಿ, ಸಾಹಸಮಯ ಆಟಗಳನ್ನು ಆಡಿದ ವಿದ್ಯಾರ್ಥಿಗಳು ಹರ್ಷಗೊಂಡರು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳು ಎರಡು ದಿನದ ಶಿಬಿರ ಪ್ರಯೋಜನಗಳ, ಪಟ್ಟಿ ಖುಷಿಯನ್ನು ಅನುಭವದ ಹಂಚಿಕೊಂಡರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸ್ವಯಂ ಸೇವಕರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಯಸ್, ಗೈಡ್ಸ್ ಕ್ಯಾಪ್ಟನ್ ವಿಲ್ಮಾ ಫೆರ್ನಾಂಡಿಸ್, ಮೇಳದ ನಾಯಕ ಸ್ಕೌಟರ್ ಬಾಲಕೃಷ್ಣ ಪೊರ್ದಾಲ್, ಗೈಡರ್ ನಳಿನಾಕ್ಷಿ, ಭವ್ಯ ಯೋಗಿಶ್, ರೇಷ್ಮಾ, ದಿವ್ಯ ಕುಮಾರಿ, ಹರಿಣಾಕ್ಷಿ, ಜೋಸ್ಲಿನ್ ಪಾಯ್ಸ್ ಹಾಗೂ ಜಯಲಕ್ಷ್ಮಿ ಉಪಸ್ಥಿತರಿದ್ದರು. ಶಾಲಾ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ದಳದಿಂದ 350 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here