ಕಾವು: ಬುಶ್ರಾ ಆಂಗ್ಲಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಎಸ್ ಎಸ್ ಎಲ್ ಸಿ ಮಕ್ಕಳಿಗೆ “ನಗುವಿನ ಓದು ಗೆಲುವಿನ ಕಡೆಗೆ” ಪರಿಣಾಮಕಾರಿ ಓದು ಹಾಗೂ ಪರೀಕ್ಷಾ ಸಿದ್ಧತೆ ಬಗ್ಗೆ ಕಾರ್ಯಗಾರ ಮಾ.12ರಂದು ಶಾಲೆಯಲ್ಲಿ ನಡೆಯಿತು.
ತರಬೇತುದಾರರಾಗಿ ಜೇಸಿ ಸವಿತಾರ ಮುಡೂರು ಆಗಮಿಸಿ ಮಕ್ಕಳಿಗೆ ತರಬೇತಿ ಕಾರ್ಯಗಾರ ನಡೆಸಿಕೊಟ್ಟರು.
ಶಾಲಾ ಮುಖ್ಯ ಶಿಕ್ಷಕಿ ದೀಪಿಕಾ ಚಾಕೋಟೆ, ಹಿರಿಯ ಶಿಕ್ಷಕ ಉಮೇಶ್ ಚೊಕ್ಕಾಡಿ, ಸಹ ಶಿಕ್ಷಕ ಪ್ರದೀಪ್ ರವರು ಉಪಸ್ಥಿತರಿದ್ದರು.