ಕಾರ್ಪೊರೇಷನ್ ಬ್ಯಾಂಕಿನ 120ನೇ ಸ್ಥಾಪನಾ ದಿನಾಚರಣೆ

0

ಪುತ್ತೂರು: ಕಾರ್ಪೊರೇಷನ್ ಬ್ಯಾಂಕಿನ 120ನೇ ಸ್ಥಾಪನಾ ದಿನಾಚರಣೆಯನ್ನು ಪುತ್ತೂರಿನ ನಿವೃತ್ತ ನೌಕರರು ಮಾ.12ರಂದು ಸೈನಿಕ ಭವನದಲ್ಲಿ ಆಚರಿಸಿದರು.


ಕಾರ್ಪೋರೇಶನ್ ಬ್ಯಾಂಕ್ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ರೂವಾರಿಗಳಾದ ಗಾಂಧೀಜಿ, ಬಾಲಗಂಗಾಧರ್ ತಿಲಕ್ ರಂತಹ ವರಿಂದ ಪ್ರೇರಿತವಾಗಿ ಉಡುಪಿಯಲ್ಲಿ ದಾನ ಶೂರರೆಂದೆ ಖ್ಯಾತರಾದ ಖಾನ್ ಬಹದ್ದೂರ್, ಹಾಜಿ ಅಬ್ದುಲ್ಲ, ಹಾಜಿ ಕಾಸಿಂ, ಸಾಹೇಬ್ ಬಹದ್ದೂರ್ ರವರ ನೇತೃತ್ವದಲ್ಲಿ 1906 ರ ಮಾರ್ಚ್ 12 ರಂದು ರೂ 5000/- ದ ಬಂಡವಾಳದಿಂದ ಸ್ಥಾಪಿಸಲ್ಪಟ್ಟಿತು. ಇದು ದಕ್ಷಿಣ ಭಾರತದಲ್ಲಿ ಸ್ಥಾಪಿಸಲಾದ ಪ್ರಥಮ ಬ್ಯಾಂಕಾಗಿದೆ.


1980 ನೇ ಇಸವಿಯಲ್ಲಿ ಭಾರತ ಸರ್ಕಾರದ ಆದೇಶದಂತೆ ರಾಷ್ಟ್ರೀಕರಣಗೊಂಡ ಬ್ಯಾಂಕ್ ತದನಂತರ ಭಾರತದಾದ್ಯಂತ ಶಾಖೆಗಳನ್ನು ಪಸರಿಸಿ ಜನಸೇವೆಯಲ್ಲಿ ಮಂಚೂಣಿಯಲ್ಲಿತ್ತು. ಸತತವಾಗಿ ಭಾರತದ ನಂಬರ್ ಒನ್ (No. 1) ಬ್ಯಾಂಕೆಂದು ಹೆಸರುಗಳಿಸಿ ಗ್ರಾಹಕ ಸೇವೆಯಲ್ಲಿ ಅಗ್ರಣಿ ಬ್ಯಾಂಕಾಗಿ ಹೊರಹೊಮ್ಮಿತು.


ಬ್ಯಾಂಕು ಜಿಲ್ಲೆಯ ಬಹುತೇಕ ಜನರಿಗೆ ಅನ್ನದಾತನಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ತನ್ನ ಸಂಪೂರ್ಣ ಸಹಕಾರ ನೀಡಿತ್ತು.
ಭಾರತ ಸರ್ಕಾರದ ಆಶಯದಂತೆ ಹಣಕಾಸು ಇಲಾಖೆಯ ನಿರ್ದೇಶನದಂತೆ 01.04.2020 ರಂದು ಹಿರಿಯ ಬ್ಯಾಂಕಾದ ಯೂನಿಯನ್ ಬ್ಯಾಂಕ್ ಜೊತೆ ವಿಲೀನವಾದಾಗ ಮೂರು ಲಕ್ಷ ಕೋಟಿ ವ್ಯವಹಾರವನ್ನು ತನ್ನ 2750 ಶಾಖೆಗಳ ಮೂಲಕ ಸುಮಾರು 20000 ನೌಕರರ ಸೇವೆಯಿಂದ ನಡೆಸುತ್ತಿತು.


ಕಾರ್ಯಕ್ರಮದಲ್ಲಿ ಸುಮಾರು 30 ನಿವೃತ್ತ ನೌಕರರು ಭಾಗವಹಿಸಿದರು. ಸ್ಥಾಪಕ ಅಧ್ಯಕ್ಷರಿಗೆ ಪುಷ್ಪನಮನ ಸಲ್ಲಿಸಿ ತಾವು ಸೇವೆಸಲ್ಲಿಸಿದ ಹಾಗೂ ತಮ್ಮ ಜೀವನ ರೂಪಿಸಿದ ಬ್ಯಾಂಕಿನ ನೆನಪನ್ನು ಕೊಂಡಾಡಿದರು.
ಕಾರ್ಯಕಮದ ಸಂಚಾಲನೆಯನ್ನು ಸತೀಶ್ ರಾವ್ ಹಾಗೂ ಗೋಪಾಲಕೃಷ್ಣ ಭಟ್ ನೆರವೇರಿಸದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾದ ಆಡಳಿತ ಮಂಡಳಿ ಯ ಸದಸ್ಯರಾದ ಈಶ್ವರ್ ನಾಯ್ಕ್ ಹಾಗೂ ಕುಂಜಾರು ದೇವಾಲದ ಆಡಳಿತ ಮಂಡಳಿಯ ಸದಸ್ಯರಾದ ಬಾಳಪ್ಪ ನಾಯ್ಕ್ ರನ್ನು ಸಭೆ ಅಭಿನಂದಿಸಿತು.
ಹಿರಿಯ ನಿವೃತ್ತ ಅಧಿಕಾರಿಗಳಾದ ಎಂ ಎನ್ ವಿ ಕಾಮತ್ ಹಾಗೂ ಪದ್ಮನಾಭ ಪ್ರಭು ರವರನ್ನು ಸನ್ಮಾನಿಸಲಾಯಿತು. ರವೀಶ ನಾಯಕ ರವರು ವಂದನಾರ್ಪಣೆ ನಿರ್ವಹಿಸಿದರು.

LEAVE A REPLY

Please enter your comment!
Please enter your name here