ನಿಡ್ಪಳ್ಳಿ: ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ಕರ್ನಪ್ಪಾಡಿ ನಿಡ್ಪಳ್ಳಿ ಇದರ ವತಿಯಿಂದ ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾ.12ರಿಂದ 14ರ ತನಕ ವಿಜೃಂಭಣೆಯಿಂದ ನಡೆಯಿತು.
ಮಾ.12ರಂದು ಗಣಪತಿ ಹೋಮ, ಬ್ರಹ್ಮರ ತಂಬಿಲ ಮತ್ತು ನಾಗತಂಬಿಲ ಸೇವೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ ಬಳಿಕ ರಾತ್ರಿ ಭಂಡಾರ ನಂತರ ಕೊಡಮಂತಾಯ ದೈವದ ನೇಮ ನಡೆಯಿತು. ಮಾ.13ರಂದು ಗಣಪತಿ ಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಬೈದರುಗಳ ಗರಡಿ ಇಳಿಯುವುದು, ಕಿನ್ನಿದಾರು ಗರಡಿ ಇಳಿಯುವುದು ನಡೆದು ಪ್ರಾತಃಕಾಲ ದರ್ಶನ ಪಾತ್ರಿಗಳ ಸೇಟ್, ಬೈದರುಗಳ ಸೇಟ್ ನಂತರ ಮಾ.14ರಂದು ಬೆಳಗ್ಗೆ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಎನ್.ಶಿವಪ್ಪ ಪೂಜಾರಿ ನುಳಿಯಾಲು ಮತ್ತು ಸಮಿತಿ ಸದಸ್ಯರು ಹಾಗೂ ಕರ್ನಪ್ಪಾಡಿ ಮನೆಯವರು ಮತ್ತು ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಶ್ರೀ ಬೈದರ್ಕಳರವರ ಗಂಧ ಪ್ರಸಾದ ಹಾಗೂ ಅನ್ನ ಪ್ರಸಾದ ಸ್ವೀಕರಿಸಿದರು.