ಪುತ್ತೂರು: ಅನ್ಸಾರಿಯಾ ಜುಮಾ ಮಸ್ಜಿದ್ ಮಂಜ ಇದರ ಆಶ್ರಯದಲ್ಲಿ ರಂಝಾನ್ ಪ್ರಭಾಷಣ ಹಾಗೂ ಇಫ್ತಾರ್ ಕೂಟ ಮಾ.16ರಂದು ಮಂಜ ದರ್ಗಾ ವಠಾರದಲ್ಲಿ ನಡೆಯಲಿದೆ.
ಅಸರ್ ನಮಾಜಿನ ಬಳಿಕ ರಂಝಾನ್ ಪ್ರಭಾಷಣ ನಡೆಯಲಿದ್ದು ಹಾಫಿಲ್ ಅಸ್ಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಙಳ್ ಹಾಗೂ ಶೈಖುನಾ ಮಹಮೂದುಲ್ ಫೈಝಿ ಓಲೆಮುಂಡೋವು ದುವಾ ಮತ್ತು ನೇತೃತ್ವ ವಹಿಸಲಿದ್ದಾರೆ. ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಪ್ರಭಾಷಣ ನಡೆಸಲಿದ್ದಾರೆ ಎಂದು ಯೂಸುಫ್ ಗೌಸಿಯಾ ಸಾಜ ತಿಳಿಸಿದ್ದಾರೆ.