ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಶ್ರೀ ದೇವಳದ ಅಶ್ವತ್ಥ ವೃಕ್ಷದ ಪ್ರತಿಷ್ಠೆ, ಉಪನಯನ, ವಿವಾಹಾದಿ ಸಂಸ್ಕಾರಗಳು ಮಾ.15 ಮತ್ತು 16ರಂದು ನಡೆಯಿತು.
ಮಾ.15ರಂದು ಬೆಳಿಗ್ಗೆ ಅಶ್ವತ್ಥ ವೃಕ್ಷದ ಸಂಸ್ಕಾರಗಳು, ವಾಯಸೊಚ್ಚಿಷ್ಠ ಶಾಂತಿ, ಮಂಗಳಾರತಿ ನಡೆಯಿತು. ಸಂಜೆ ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತುಬಲಿ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಮಾ.16ರಂದು ಬೆಳಿಗ್ಗೆ ಅಶ್ವತ್ಥ ವೃಕ್ಷದ ಸಂಸ್ಕಾರಗಳು ನಡೆದು 10.15ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಅಶ್ವತ್ಥ ಪ್ರತಿಷ್ಠೆ, ಅನಂತರ ಉಪನಯನ, ವಿವಾಹಾದಿ ಸಂಸ್ಕಾರಗಳು ನಡೆಯಿತು. ಅಪರಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ದೇವಳದ ಪವಿತ್ರಪಾಣಿ ನರಹರಿ ಉಪಾಧ್ಯಾಯ, ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಉಡುಪರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಉತ್ಸವ ಸಮಿತಿ ಗೌರವಾಧ್ಯಕ್ಷ ರಮೇಶ ಉಪಾಧ್ಯಾಯ ಕಲ್ಲೇರಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರಾದ ಕರುಣಾಕರ ಯು.ದೊಡ್ಡ ಉರ್ಕ, ಗುರುವಪ್ಪ ಕುಂಡಾಜೆ, ಶೈಲಜಾ ಬಿ.ಆಳ್ವ ಗುತ್ತುಮನೆ, ಪುಷ್ಪಾವತಿ ಜಯಪ್ರಕಾಶ್ ಬಾರಿಂಜ, ಜಗದೀಶ್ ಶೆಟ್ಟಿ ಅಂಬಾಬೀಡು, ಮಹೇಶ್ ಬಿ.ಬಾಂತೊಟ್ಟು, ಜಗದೀಶ್ ಎ.ಅಜ್ಜಿಕುಮೇರು ಹಾಗೂ ಉತ್ಸವ ಸಮಿತಿ ಉಪಾಧ್ಯಕ್ಷರು, ಸದಸ್ಯರು, ಬೈಲುವಾರು ಸಮಿತಿ ಸಂಚಾಲಕರು, ಗ್ರಾಮಸ್ಥರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
