ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ’ಡೆವಿಲ್’ ಚಿತ್ರ : ಪುತ್ತೂರಿನ ಬೆಡಗಿ ರಚನಾ ರೈ ನಾಯಕಿ ನಟಿ!

0

’ಡೆವಿಲ್’ ಕನ್ನಡ ಚಲನಚಿತ್ರದಲ್ಲಿ ಪುತ್ತೂರಿನ ಬೆಡಗಿ ರಚನಾ ರೈ ನಾಯಕಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರು ಹಾರಾಡಿ ಶಾಲೆಯ ಶಿಕ್ಷಕಿ ಗಂಗಾ ರೈ ಅವರ ಪುತ್ರಿ.


ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ನಟನೆಯ ’ಡೆವಿಲ್’ ಚಿತ್ರದಲ್ಲಿ ನಾಯಕಿಯಾಗಿರುವ ರಚನಾ ರೈ ಅವರು ಪುತ್ತೂರಿನ ಕೊಂಬೆಟ್ಟುನಲ್ಲಿ ಪ್ರಸ್ತುತ ವಾಸ್ತವ್ಯ ಹೊಂದಿದ್ದಾರೆ. ತುಳು ಚಲನಚಿತ್ರದಲ್ಲಿ ಹಲವು ಪಾತ್ರ ನಿರ್ವಹಿಸಿರುವ ಇವರು ಪುತ್ತೂರು ಹಾರಾಡಿ ಶಾಲಾ ಶಿಕ್ಷಕಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಂಗಾ ರೈ ಅವರ ಪುತ್ರಿ. ರಚನಾ ರೈ ಅವರು ಎಲ್‌ಕೆಜಿಯಿಂದ ಪಿಯುಸಿ ತನಕ ಎಸ್‌ಡಿಎಮ್ ಉಜಿರೆಯಲ್ಲಿ ಮತ್ತು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಮಾಡಿದ್ದಾರೆ. ಈ ನಡುವೆ ಅವರು ತುಳು ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ತುಳು ಚಿತ್ರ ‘ಸರ್ಕಸ್’ನಲ್ಲಿ ನಾಯಕಿಯಾಗಿ ಪಾತ್ರ ಮಾಡಿದ್ದಾರೆ. ಇದೀಗ ಕನ್ನಡ ಚಲನಚಿತ್ರ ’ಡೆವಿಲ್’ ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಕೆ ಬ್ಯಾಡ್ಮಿಂಟನ್ ಪ್ಲೇಯರ್ ಕೂಡಾ ಆಗಿದ್ದಾರೆ. ತುಳುನಾಡ ಚೆಲುವೆ ಮಾಡೆಲ್, ಡ್ಯಾನ್ಸರ್, ಬರಹಗಾರ್ತಿ ಕೂಡಾ ಆಗಿರುವ ಇವರು ʼಓ ಮೈ ಡಾಗ್ʼ ಎಂಬ ಪುಸ್ತಕ ಬರೆದಿದ್ದಾರೆ. ಈಗಾಗಲೇ ’ಡೆವಿಲ್’ ಚಿತ್ರದ ಎರಡು ಟೀಸರ್‌ಗಳು ಬಂದು ಹಿಟ್ ಆಗಿದೆ. ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲೇ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ಈ ವರ್ಷ ಡಿಸೆಂಬರ್ ವೇಳೆಗೆ ಆಕ್ಷನ್ ಥ್ರಿಲ್ಲರ್ ’ಡೆವಿಲ್’ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.


ಈ ವಾರದಲ್ಲಿ ಉತ್ತರ ಪ್ರದೇಶದಲ್ಲಿ ಶೂಟಿಂಗ್
ಡೆವಿಲ್ ಚಿತ್ರದ ಮುಹೂರ್ತ 2023ರ ನವೆಂಬರ್ 2ರಂದು ಬೆಂಗಳೂರಿನ ದೊಡ್ಡ ಮಹಾಗಣಪತಿ ದೇವಾಲಯದಲ್ಲಿ ನಡೆದಿತ್ತು. ಅದಾದ ಬಳಿಕದ ಸನ್ನಿವೇಶದಲ್ಲಿ ನಿಂತು ಹೋಗಿದ್ದರೂ ಇದೀಗ ಚಿತ್ರೀಕರಣ ಪುನರಾರಂಭಗೊಂಡಿದೆ. ಸದ್ಯಕ್ಕೆ ಮಾತಿನ ಭಾಗದ ಸನ್ನಿವೇಶಗಳ ಚಿತ್ರೀಕರಣ ನಡೀಯುತ್ತಿದೆ. ಚಿತ್ರದ ನಾಯಕಿಯಾಗಿರುವ ರಚನಾ ರೈ ನಟನೆಯ ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆದಿದೆ. ದರ್ಶನ್ ಅವರ ಪಾತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆದಿದೆ. ಇನ್ನೂ ಇವರಿಬ್ಬರು ಜೊತೆಯಾಗಿ ನಟಿಸುವ ಚಿತ್ರೀಕರಣ ಉತ್ತರ ಪ್ರದೇಶದಲ್ಲಿ ವಾರದೊಳಗೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here