ಪುತ್ತೂರು: ಪರಿಶಿಷ್ಟ ಜಾತಿ ಕಾಲೋನಿ ಅಭಿವೃದ್ದಿಗೆ 50 ಲಕ್ಷ ಅನುದಾನ ಬಿಡುಗಡೆ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ ಕಾಲೋನಿಗಳ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಅವರ ಮನವಿಯಂತೆ ಕರ್ನಾಟಕ ಸರಕಾರದಿಂದ ರೂ 50 ಲಕ್ಷ ಮಂಜೂರಾಗಿದೆ.

ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಕೊಳ್ಳುಚಾಲು ನಾಗನ ಕೋಡಿ ರಸ್ತೆ ಕಾಂಕ್ರಿಟೀಕರಣ 10 ಲಕ್ಷ, ಅರಿಯಡ್ಕ ಮಾಡ್ನೂರು ಗ್ರಾಮದ ಕೋಟೆಗುಡ್ಡೆ-ಮುಟ್ಟೇಲು ಪ. ಜಾತಿ ಕಾಲೋನಿ ತೆರಳುವ ರಸ್ತೆ 10 ಲಕ್ಷ, ಉಪ್ಪಿನಂಗಡಿ ಗ್ರಾಮದ ಹಿರ್ತಡ್ಕ ಕಾಲೋನಿ ರಸ್ತೆ 10 ಲಕ್ಷ, ಕೋಡಿಂಬಾಡಿ ಗ್ರಾಮದ ನೆಕ್ಕರಾಜೆ-ಕೃಷ್ಣಗಿರಿಪ ಜಾತಿ ಕಾಲೋನಿ ರಸ್ತೆ ಕಾಂಕ್ರಿಟೀಕರಣ 10 ಲಕ್ಷ ,ಶಾಂತಿಗೋಡು ಗ್ರಾಮದ ಆನಾಜೆ ಕೊಂಬತ್ತರಮುಲೆ ಕಾಲೋನಿ ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ಬಿಡುಗಡೆಯಾಗಿದೆ. ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆಗಳ ಅಭಿವೃದ್ದಿಗೆ ಈ ಹಿಂದೆಯೂ ಅನುದಾನ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ 5 ಕಾಲೋನಿಗೆ ತಲಾ 10 ಲಕ್ಷ ಅನುದಾನ ಬಿಡುಗಡೆಯಾಗಿದೆ. ದಲಿತ ಕಾಲೋನಿಗಳ ಅಭಿವೃದ್ದಿಗೆ ಕರ್ನಾಟಕ ಸರಕಾರ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ದಲಿತರ ಪರ ಇರುವ ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ದಲಿತರ ಪರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಕಳೆದ ಕೆಲದಿನಗಳ ಹಿಂದೆ ಸುಮಾರು 58 ಮಂದಿಗೆ 75 ಲಕ್ಷ ರೂ ಅನುದಾನದಲ್ಲಿ ಕೊಳವೆ ಬಾವಿ ಮಂಜೂರು ಮಾಡಿತ್ತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ದೊರೆಯಲಿದೆ.

ಅಶೋಕ್ ರೈ , ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here