ಪುತ್ತೂರು:ಪುತ್ತೂರು ಘಟಕದ ವತಿಯಿಂದ 2025 ನೇ ಸಾಲಿನ ಮಹಿಳಾ ದಿನಾಚರಣೆ ಅಂಗವಾಗಿ ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ದಿವ್ಯ ಚೇತನರ ಸೇವೆಯನ್ನು ಮಾಡುತ್ತಿರುವ ಜ್ಯೋತಿ ಅಣ್ಣಪ್ಪರವರನ್ನು ಸನ್ಮಾನಿಸಲಾಯಿತು.
ಹಾಗೂ ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರಾಕ್ಟಿಕಲ್ ಅಕೌಂಟೆನ್ಸಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಮುಗಿಸಿರುವ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ JCI ಪುತ್ತೂರಿನ ಅಧ್ಯಕ್ಷರಾದ JC ಭಾಗ್ಯೇಶ್ ರೈ, ಲೇಡಿ ಕೊ-ಆರ್ಡಿನೇಟರ್ JC ಆಶಾ ಮೋಹನ್ ಮತ್ತು JJC ಸ್ವಸ್ತಿ ಶೆಟ್ಟಿ, ಘಟಕ ಆಡಳಿತ ಮಂಡಳಿ ಸದಸ್ಯರಾದ JC ಶೋಭಾ ರೈ, JC ಅಶ್ವಿನಿ ಹಾಗೂ ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರು ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.