ಆಲಂಕಾರು: ಗೋಸೇವಾ ಗತಿವಿಧಿ ಕರ್ನಾಟಕ, ರಾಧಾಸುರಭಿ ಗೋಮಂದಿರ,ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ( ರಿ) ಬ್ರಹ್ಮಗಿರಿ ಬಂಟ್ವಾಳ ಇದರ ಆಶ್ರಯದಲ್ಲಿ ನಂದಿ ರಥಯಾತ್ರೆ ಕರ್ನಾಟಕ ರಾಜ್ಯಾದ್ಯಂತ ಡಿ.31 ರಿಂದ ಮಾ.29 ರ ತನಕ ನಡೆಯಲಿದ್ದು ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಂದಿ ರಥಯಾತ್ರೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ.ಸುಬ್ರಹ್ಮಣ್ಯ ರಾವ್ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆ ಮತ್ತು ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಸ್ವಾಗತಿಸಿದರು.

ನಂದಿ ರಥಯಾತ್ರೆಯಪ್ರದಾನ ಕಾರ್ಯದರ್ಶಿ ನವೀನ ಮಾರ್ಲ ರವರು ವಿಷಮುಕ್ತಗಾಳಿ,ಮಣ್ಣು, ಆಹಾರ, ಪ್ರಕೃತಿ, ಪರಿಸರ ಸಂರಕ್ಷಣೆ,ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ,ಲೋಕಕಲ್ಯಾರ್ಥಕವಾಗಿ ವಿಷ್ಣುಸಹಸ್ರನಾಮ ಪಾರಾಯಣ, ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರೆಯುವಂತಾಗಲು ಸಹಜ ಕೃಷಿ ವಿಸ್ತರಣೆ,ಗವ್ಯ ಉತ್ಪನ್ನ ಬಳಕೆಯ ಕುರಿತು ತಿಳಿಸಿದರು ನಂತರ ದೇವಸ್ಥಾನದಲ್ಲಿ ನಂದಿರಥದಲ್ಲಿ ಇದ್ದ ಗೋಪಾಲಕೃಷ್ಣ ದೇವರಿಗೆ ಮತ್ತು ನಂದಿಗೆ ಆರತಿ ಬೆಳಗಿ ಪ್ರಸಾದ ವಿತರಿಸಿದರು ನಂತರ ಅಲಂಕಾರು ಭಾರತಿ ಶಾಲೆಯಲ್ಲಿ ಸ್ವಾಗತಿಸಿ ನಂತರ ದುರ್ಗಾಂಬಾ ಪದವಿ ಪೂರ್ವಕಾಲೇಜ್ ನಲ್ಲಿ ಸ್ವಾಗತಿಸಿ ಆಲಂಕಾರು ಪೇಟೆಯಲ್ಲಿ ಮೆರವಣಿಗೆ ಮಾಡಿ ಗೋವಿನ ಮಹತ್ವವನ್ನು ತಿಳಿಸಿ ನಂದಿರಥಯಾತ್ರೆಯನ್ನು ಉಪ್ಪಿನಂಗಡಿಗೆ ಬೀಳ್ಕೋಡಲಾಯಿತು. ಸಂದರ್ಭದಲ್ಲಿ ಗ್ರಾಮವಿಕಾಸ ಪುತ್ತೂರು ಜಿಲ್ಲಾ ಪ್ರಮುಖ ಭಾಸ್ಕರ ಹಿರಿಂಜ,ಜಿಲ್ಲಾ ಗೋ ಸಂಯೋಜಕ ನಿರಂಜನ್,ಕಡಬ ತಾಲೂಕು ಗ್ರಾಮವಿಕಾಸ ಪ್ರಮುಖ ಜನಾರ್ಧನಾ ಕದ್ರ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಊರವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.