ಪುತ್ತೂರು:ಪಡೀಲ್‌ನಲ್ಲಿ 6 ವರ್ಷಗಳ ಹಿಂದೆ ಮೆಸ್ಕಾಂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಬೆದರಿಕೆಯೊಡಿದ್ದ ಪ್ರಕರಣದ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಪಡೀಲ್ ಮನೆಯ ವಠಾರದಲ್ಲಿ ಅನುಮತಿ ಇಲ್ಲದೆ ಮೆಸ್ಕಾಂ ಸಿಬ್ಬಂದಿಗಳು ಮರದ ಗೆಲ್ಲುಗಳನ್ನು ಕಡಿದಿರುವ ಕುರಿತು ವಿಚಾರಿಸಿ ಮಾಜಿ ಪುರಸಭೆ ಅಧ್ಯಕ್ಷ ಗಣೇಶ್ ರಾವ್ ಅವರು ಮೆಸ್ಕಾಂ ಪವರ್‌ಮ್ಯಾನ್‌ಗಳಿಗೆ ಎಚ್ಚರಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.ಮೆಸ್ಕಾಂನ ಐತ್ತಪ್ಪ ಎಂಬವರ ದೂರಿನಂತೆ ಗಣೇಶ್ ರಾವ್ ವಿರುದ್ಧ,ಮೆಸ್ಕಾಂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಮತ್ತು ಬೆದರಿಕೆ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.ಆರೋಪಿ ಪರ ವಕೀಲರಾದ ಭಾಸ್ಕರ್ ಕೋಡಿಂಬಾಳ ಮತ್ತು ಕುಮಾರನಾಥ ಎಸ್ ವಾದಿಸಿದ್ದರು