ಅರಿಯಡ್ಕ: ಶ್ರೀ ಕೃಷ್ಣ ಭಜನಾ ಮಂದಿರ ರಿ ಕೌಡಿಚ್ಚಾರು -ಅರಿಯಡ್ಕ ಇಲ್ಲಿ ಎಪ್ರಿಲ್-13 ರಂದು ನಡೆಯುವ 38 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಕೃಷ್ಣ ಸಭಾ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಗುಂಡ್ಯಡ್ಕ ವಾಸು ಪೂಜಾರಿ, ಅಧ್ಯಕ್ಷ ರಾಮದಾಸ್ ರೈ ಮದ್ಲ, ಹಾಗೂ ಪದಾಧಿಕಾರಿಗಳು ಹಾಗೂ ಸದಸ್ಯರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಶ್ರೀ ಕೃಷ್ಣ ಯಕ್ಷಗಾನ ಕಲಾ ಮಂಡಳಿಯ ಪದಾಧಿಕಾರಿಗಳು, ಉಪಸ್ಥಿತರಿದ್ದರು.ಸಂಘದ ಕಾರ್ಯದರ್ಶಿ ದೀಪಕ್ ಕುಲಾಲ್ ಆಕಾಯಿ ಸ್ವಾಗತಿಸಿ, ವಂದಿಸಿದರು.