ಪುತ್ತೂರು:ಹಿಂದೂ ವಿದ್ಯಾರ್ಥಿನಿಯೊಬ್ಬರು ಮುಸ್ಲಿಂ ಯುವಕನೊಂದಿಗೆ ಹೊಟೇಲ್‌ನಲ್ಲಿ ಜ್ಯೂಸ್ ಕುಡಿಯುತ್ತಿದ್ದುದನ್ನು ಗಮನಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಇಬ್ಬರನ್ನೂ ಪೊಲೀಸರಿಗೊಪ್ಪಿಸಿದ ಘಟನೆ ಬಸ್‌ನಿಲ್ದಾಣದ ಬಳಿ ನಡೆದಿದೆ.
ಮೂಲತ: ಶಿವಮೊಗ್ಗದವರಾಗಿದ್ದು ಪುತ್ತೂರಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಹಿಂದೂ ವಿದ್ಯಾರ್ಥಿನಿ ಬೆಳಗ್ಗೆ ಪುತ್ತೂರು ಬಸ್ಸು ನಿಲ್ದಾಣದ ಬಳಿಯ ಜ್ಯೂಸ್ ಪಾರ್ಲರ್‌ನಲ್ಲಿ ಮುಸ್ಲಿಂ ಯುವಕನೊಂದಿಗೆ ಜ್ಯೂಸ್ ಕುಡಿಯಲು ತೆರಳಿದ್ದರು.ಜೋಡಿಯನ್ನು ಗಮನಿಸಿದ ಸ್ಥಳೀಯರು, ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ.ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನೂ ಪುತ್ತೂರು ಮಹಿಳಾ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ.ಯುವಕ ಹಾಗೂ ಯುವತಿ ಒಂದೇ ಊರಿನವರಾಗಿದ್ದು ಪರಸ್ಪರ ಪರಿಚಿತರೆನ್ನುವ ವಿಚಾರ ಠಾಣೆಯಲ್ಲಿ ವಿಚಾರಣೆ ವೇಳೆ ತಿಳಿದು ಬಂದಿದೆ.ವಿದ್ಯಾರ್ಥಿನಿಯ ಮನೆಯವರಿಗೆ ಘಟನೆಯ ಬಗ್ಗೆ ಠಾಣೆಯಿಂದ ಮಾಹಿತಿ ನೀಡಿ, ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.