ಪುತ್ತೂರು: ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿಗಳಾಗಿರುವ ಸ್ನೇಹಿತರು ಒಟ್ಟಾಗಿ ಸೇರಿ ರಚಿಸಿರುವ ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಪುತ್ತೂರು ಇದರ ಸಾಮಾಜಿಕ ಚಟುವಟಿಕೆಗಳ ಭಾಗವಾಗಿ ದ್ವಿತೀಯ ವರ್ಷದ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ವ್ಯಾಪ್ತಿಯ ಒಟ್ಟು 30 ಅರ್ಹ ಬಡ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಿಸಲಾಯಿತು.
ಯೋಜನಾಪೂರ್ವಕವಾಗಿ ಒಂದು ವರ್ಷದಲ್ಲಿ ಸಾಮಾಜಿಕವಾಗಿ ನಡೆಸುವ ಹಲವು ವೈವಿಧ್ಯ ಕಾರ್ಯಕ್ರಮಗಳ ಭಾಗವಾಗಿ ರಂಜಾನ್ ಕಿಟ್ ಕೂಡ ಒಂದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಆಸೀಫ್ ಪಾಪೆತ್ತಡ್ಕ ತಿಳಿಸಿದರು. ಈ ಸಂದರ್ಭದಲ್ಲಿ ಅಲ್ ರಬೀಹ್ ಉಪಾಧ್ಯಕ್ಷರಾದ ಸಿದ್ದೀಕ್ ಗಡಿಪ್ಪಿಲ,ಪ್ರಧಾನ ಕಾರ್ಯದರ್ಶಿ ರಿಯಾಝ್ ಶಾಂತಿಗೋಡು,ಸದಸ್ಯ ಅಬ್ದುಲ್ ರಜಾಕ್ ಸಾಲ್ಮರ ಉಪಸ್ಥಿತರಿದ್ದರು. ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಸಲಹೆಗಾರ ಅಜೀರ್ ಕಲ್ಲಡ್ಕ, ಕಾರ್ಯಕಾರಿಣಿ ಸಮಿತಿಯ ಸದಸ್ಯ ನೌಶಾದ್ ಕಟ್ಟತ್ತಾರ್, ನಾಸಿರ್ ಪರ್ಪುನ್ಜ,ಸಮದ್ ಸವಣೂರು ,ಆರಿಸ್ ಸವಣೂರು,ಉಸ್ಮಾನ್ ಎ ಕೆ ಸಹಕಾರ ನೀಡಿದರು.