ವಿಟ್ಲ: ಬಟ್ಟೆ ಅಂಗಡಿಗೆ ನುಗ್ಗಿ ಬೆದರಿಕೆಯೊಡ್ಡಿ ಬಟ್ಟೆಗಳೊಂದಿಗೆ ಪರಾರಿಯಾದ ತಂಡ

0

ವಿಟ್ಲ: ಹಾಡ ಹಗಲೇ ಬಟ್ಟೆ ಅಂಗಡಿಗೆ ನುಗ್ಗಿದ ತಂಡವೊಂದು ಅಲ್ಲಿದ್ದ ಮಹಿಳಾ ಸಿಬ್ಬಂದಿಗೆ‌ ಬೆದರಿಕೆಯೊಡ್ಡಿ ಬಟ್ಟೆ ಸಹಿತ ಇತರ ವಸ್ತುಗಳನ್ನು ದೋಚಿದ ಘಟನೆ ವಿಟ್ಲ ಪೇಟೆಯಲ್ಲಿ ಮಾ.18ರಂದು ನಡೆದಿದೆ.

ಶಾಲಾ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಮಾ. 18 ರ ಮಧ್ಯಾಹ್ನ ವೇಳೆ ಕಾರಿನಲ್ಲಿ ಬಂದ ನವೀನ್ ಕುಂಪಲ ಮತ್ತು ಇತರ ಮೂರು ಜನರಿದ್ದ ತಂಡವೊಂದು ಏಕಾಏಕಿ ಅಕ್ರಮ ಪ್ರವೇಶ ಮಾಡಿ ಅಂಗಡಿಯಲ್ಲಿರುವ ವಸ್ತುಗಳನ್ನು ಹಾಗೂ ಬಟ್ಟೆಯನ್ನು ತನ್ನ ಬ್ಯಾಗಿನೊಳಗೆ ತುಂಬಿಸಿ ಕೊಂಡೋಯ್ಯಲು ಪ್ರಯತ್ನಿಸಿತ್ತು. ಈ ವೇಳೆ ಮಹಿಳಾ ಸಿಬ್ಬಂದಿಯು ಪ್ರಶ್ನಿಸಿದ ವೇಳೆ ಆಕೆಗೂ ಬೆದರಿಕೆ ಒಡ್ಡಿದ ತಂಡ ಬಟ್ಟೆಗಳನ್ನು ಕೊಂಡೊಯ್ದಿದೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಲಾಗಿದೆ.


ಘಟನೆಯು ಹತ್ತಿರದ ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

LEAVE A REPLY

Please enter your comment!
Please enter your name here