ಪುತ್ತೂರು: ದರ್ಬೆ ಕಾವೇರಿಕಟ್ಟೆ ದಿ.ನೋರ್ಬರ್ಟ್ ಪಿಂಟೊ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ದಿ.ಬೆನ್ನಿ(ಬೆನ್ನಿ ಟೀಚರ್)ಪಿಂಟೊರವರ ಹಿರಿಯ ಪುತ್ರ ಪ್ರವೀಣ್ ಪಿಂಟೊ(62 ವ.) ರವರು ಹೃದಯಾಘಾತದಿಂದ ಮಾ.21ರಂದು ನಸುಕಿನ ಜಾವ ಎರಡು ಗಂಟೆಗೆ ನಿಧನರಾಗಿದ್ದಾರೆ.
ಮೃತ ಪ್ರವೀಣ್ ಪಿಂಟೊರವರು ಡೊನ್ ಬೊಸ್ಕೊ ಕ್ಲಬ್ ನ ಸಕ್ರಿಯ ಸದಸ್ಯರಾಗಿದ್ದು ಓರ್ವ ನಾಟಕ ಕಲಾವಿದನಾಗಿ ಕ್ಲಬ್ ಹಮ್ಮಿಕೊಂಡ ಹಲವಾರು ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ ತೆರೆಕಂಡ ಕೊಂಕಣಿ ಚಲನಚಿತ್ರ ಆಸ್ಮಿತಾಯ್ ಚಿತ್ರದಲ್ಲೂ ಅವರು ಅಭಿನಯಿಸಿದ್ದರು. ಡೊನ್ ಬೊಸ್ಕೊ ಕ್ಲಬ್ ಹಾಗೂ ಕ್ರಿಸ್ಟೋಫರ್ ಅಸೋಸಿಯೇಷನ್ ರವರು ಜಂಟಿಯಾಗಿ ಕ್ರಿಸ್ಮಸ್ ಹಬ್ಬದ ಸಂದರ್ಭ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ಕಳೆದ ವರ್ಷ ಪುತ್ತೂರು, ಮರೀಲು, ಬನ್ನೂರು ಕ್ರಿಸ್ಮಸ್ ಸೌಹಾರ್ದ ಸಮಿತಿ ಹಮ್ಮಿಕೊಂಡ ಕ್ರಿಸ್ಮಸ್ ದಬಾಜೊ ಕಾರ್ಯಕ್ರಮದಲ್ಲಿ ಸಾಂತಾಕ್ಲಾಸ್ ಪೋಷಾಕು ಧರಿಸುವ ಮೂಲಕ ಸೇವೆ ನೀಡಿದ್ದರು. ಮೃತರು ಪತ್ನಿ ಸಂತ ಫಿಲೋಮಿನಾ ಕಾಲೇಜಿನ ಗ್ರಂಥಾಲಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಝೀಟಾ ಪಿಂಟೊ, ಪುತ್ರಿ ಫ್ರೆನಿಟ ಪಿಂಟೊ, ಸಹೋದರ ಪ್ರಶಾಂತ್ ಪಿಂಟೊ ಬೆಂಗಳೂರುರವರನ್ನು ಅಗಲಿದ್ದಾರೆ.