ಮದರಸ ವಿರುದ್ಧ ಹೇಳಿಕೆ : ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಸೂಕ್ತ ಕ್ರಮಕ್ಕೆ ನೂರುದ್ದೀನ್ ಸಾಲ್ಮರ ಆಗ್ರಹ

0

ಪುತ್ತೂರು : ಕರ್ನಾಟಕ ವಿಧಾನಸಭೆಯಲ್ಲಿ ವಿಚಾರವೊಂದರ ಬಗ್ಗೆ ಮಾತನಾಡುತ್ತಾ ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರವರು ‘ಮದರಸಗಳಲ್ಲಿ ದೇಶದ ವಿರುದ್ಧ ಕಲಿಸುತ್ತಾರೆ’ ಎಂಬ ಆಧಾರ ರಹಿತ ಹಾಗೂ ಕೋಮು ಪ್ರಚೋದಕ ಹೇಳಿಕೆ ವಿರುದ್ಧ, ಸದನವು ಕೂಡಲೇ ಕ್ರಮ ಕೈಗೊಂಡು ಶಾಸಕತ್ವವನ್ನು ಉಚ್ಛಾಟನೆಗೊಳಿಸಿ, ವಜಾ ಗೊಳಿಸಬೇಕೆಂದು ಕೆಪಿಸಿಸಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಕರ್ನಾಟಕ ವಿಧಾನಸಭೆಯ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ.

ಮುಸಲ್ಮಾನರಿಗೆ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿರುವ ಮದರಸಗಳು, ವಿದ್ಯಾರ್ಥಿಗಳಿಗೆ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣವನ್ನು ನೂರಾರು ವರ್ಷಗಳಿಂದ ನೀಡುತ್ತಾ ಬಂದಿದೆ. ಮದರಸಗಳು ವಿದ್ಯಾರ್ಥಿಗಳಿಗೆ ಸರಿಯಾದ ಜೀವನಕ್ರಮ,ಮಾನವೀಯ ಮೌಲ್ಯಗಳ ಗಳನ್ನು ಕಲಿಸಿ, ಸತ್ಕರ್ಮದಡೇ ಅವರನ್ನು ಸಾಗಲು ಅನುವು ಮಾಡಿಕೊಡುತ್ತದೆ ಹಾಗೂ ಅವರ ತಪ್ಪನ್ನು ತಡೆಯಲು ಸೂಕ್ತ ಮಾರ್ಗದರ್ಶನವನ್ನು ನೀಡುತ್ತದೆ. ಇವರ ಈ ನಡೆ, ಮುಸಲ್ಮಾನ್ ಸಮುದಾಯಕ್ಕೆ ತೀವ್ರ ನೋವಾಗಿರುತ್ತದೆ. ಈ ನಿಟ್ಟಿನಲ್ಲಿ, ಸದನದ ಒಳಗಾದ ಈ ವಿಚಾರದಲ್ಲಿ, ಕರ್ನಾಟಕದ ವಿಧಾನಸಭಾ ಅಧ್ಯಕ್ಷರು, ಸದ್ರಿ ಶಾಸಕನ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು ಅವರನ್ನು ಸದಸ್ಯತ್ವದಿಂದ ಉಚ್ಚಾಟನೆಗೊಳಿಸಿ, ಸದಸ್ಯತ್ವ ರದ್ದತಿಗೆ ಸೂಕ್ತ ಕ್ರಮ ವಹಿಸಬೇಕೆಂದು ಕೆಪಿಸಿಸಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here