ಪುತ್ತೂರು: ಬನ್ನೂರು ಮಸ್ಜಿದ್ ಇ ನೂರಿ ಹನಫೀ ಜುಮಾ ಮಸೀದಿಯ ಖತೀಬ್ ಬೆಂಗಳೂರು ನಿವಾಸಿ ಇಸ್ಮಾಯಿಲ್ ರಿಝ್ವಿ ಉಸ್ತಾದ್ (31ವ) ರವರು ಮಾ.21 ರಂದು ಹೃದಯಾಘಾತದಿಂದಾಗಿ ನಿಧನರಾದರು.
ಇಸ್ಮಾಯಿಲ್ ರಿಝ್ವಿ ಉಸ್ತಾದ್ ರವರಿಗೆ ಹೃದಯಾಘಾತವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು.
ಅವರ ಮೃತದೇಹ ಬನ್ನೂರು ಹನಫೀ ಜುಮಾ ಮಸೀದಿಗೆ ತರಲಿದ್ದು ಮಯ್ಯತ್ ಸಂದರ್ಶನ ಬಳಿಕ ಬೆಂಗಳೂರಿಗೆ ಕೊಂಡೊಯ್ಯಲಿದ್ದಾರೆ ಎಂದು ತಿಳಿದುಬಂದಿದೆ.