ಉಪ್ಪಿನಂಗಡಿ: ಮದ್ಯವ್ಯಸನಿಯ ಕಿರುಕುಳದಿಂದ ಬೇಸತ್ತು ಪತ್ನಿ ತವರು ಮನೆಗೆ ಹೋದ ಬೇಸರದಿಂದ ಶೇಸಪ್ಪ (38 ವ) ಎಂಬಾತ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಪಡ್ಲಡ್ಕ ಎಂಬಲ್ಲಿ ನಡೆದಿದೆ.
ರಾಮಕ್ಕ ಎಂಬವರ ಮಗನಾಗಿರುವ ಈತ ಮದ್ಯವ್ಯಸನಿಯಾಗಿದ್ದು, ಗುರುವಾರದಂದು ರಾತ್ರಿ ಮನೆಗೆ ಬಂದಾತ ತಾಯಿಯೊಂದಿಗೆ ಜಗಳವಾಡಿದ್ದರು. ಈ ಸಂದರ್ಭ ಸ್ವರಕ್ಷಣೆಗಾಗಿ ತಾಯಿ ನೆರೆಮನೆಗೆ ಹೋಗಿದ್ದರೆನ್ನಲಾಗಿದೆ. ಈ ವೇಳೆ ಮನೆಯ ಎದುರುಗಡೆಯ ಹಾಲ್‌ನಲ್ಲಿ ಅಡ್ಡಕ್ಕೆ ನೇಣು ಬಿಗಿದು ಈತ ಆತ್ಮಹತ್ಯೆ ಮಾಡಿದ್ದಾನೆಂದು ಆತನ ಪತ್ನಿ ತವರು ಮನೆಗೆ ಹೋಗಿರುವ ಬೇಸರದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಈ ಕೃತ್ಯವೆಸಗಿರುವುದಾಗಿ ರಾಮಕ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.