ನೆಲ್ಯಾಡಿ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಬಿಳಿನೆಲೆ ಗ್ರಾಮದ ಕೈಕಂಬದಲ್ಲಿ ಮಾ.19ರಂದು ಸಂಜೆ ನಡೆದಿದೆ.
ನೂಜಿಬಾಳ್ತಿಲ ನಿವಾಸಿ ಕೆ.ವಿ.ಪ್ರದೀಪ್ ಗಾಯಗೊಂಡ ಬೈಕ್ ಸವಾರ. ಪ್ರದೀಪ್ ಅವರು ಬೈಕ್(ಕೆಎ 20, ಇಬಿ 1586)ನಲ್ಲಿ ಸುಬ್ರಹ್ಮಣ್ಯದಿಂದ ಗುಂಡ್ಯಕ್ಕೆ ಹೋಗುತ್ತಿದ್ದವರು ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಬರುತ್ತಿದ್ದ ಕಾರು (ಕೆಎ 18, ಝಡ್ 8546)ಡಿಕ್ಕಿಯಾಗಿದೆ. ಕಾರು ಚಾಲಕನು ಅಜಾಗರೂಕತೆಯಿಂದ ಕಾರನ್ನು ರಸ್ತೆಯ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದ ಪರಿಣಾಮ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ನೂಜಿಬಾಳ್ತಿಲ ನಿವಾಸಿ ವರ್ಗೀಸ್ ಪಿ.ಜೆ.ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.