ನೆಲ್ಯಾಡಿ: ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆಯಲ್ಲಿ ಶ್ರೀ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ನೇಮೋತ್ಸವ ಮಾ.20 ಮತ್ತು 21ರಂದು ನಡೆಯಿತು.
ಮಾ.20ರಂದು ಬೆಳಿಗ್ಗೆ ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ಗಣಹೋಮ, ತಂಬಿಲ, ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಎಣ್ಣೆತ್ತೋಡಿಯಿಂದ ಶಿರಾಡಿ ದೈವದ ಭಂಡಾರ, ಕಾಯರ್ತಡ್ಕದಿಂದ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ಭಂಡಾರ ತರಲಾಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ಬಳಿಕ ಚಕ್ರವರ್ತಿ ಕೊಡಮಣಿತ್ತಾಯಿ, ದೈವಂಕ್ಲು, ಮೈಸಂತಾಯ, ಕಡೆಂಬಿಲತ್ತಾಯ, ಪಂಜುರ್ಲಿ, ಶಿರಾಡಿದೈವ, ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಮಾ.21ರಂದು ಸಂಜೆ ನೇಮೋತ್ಸವ ಸಂಪನ್ನಗೊಂಡಿತು.
ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಶಮಂತ್‌ಕುಮಾರ್ ಬಸ್ತಿ ನೆಲ್ಯಾಡಿ, ದೈವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಜಗದೀಶ್ ಶೆಟ್ಟಿ ಕಡೆಂಬಿಲ, ಕಾರ್ಯದರ್ಶಿ ವಿಶ್ವಾಸ್ ಗೌಡ ಕಾಯರ್ತಡ್ಕ, ಜೊತೆ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕಲಾಯಿ, ಸದಸ್ಯರಾದ ಪ್ರಕಾಶ್ ಸುವರ್ಣ ಕುರುಂಬೊಟ್ಟು, ವಿಶ್ವನಾಥ ಪೂಜಾರಿ ಪಾಂಡಿಬೆಟ್ಟು ಸೇರಿದಂತೆ ವಿವಿಧ ಸಮಿತಿ ಸದಸ್ಯರು, ಕೊಣಾಲು ಗ್ರಾಮಸ್ಥರು, ಊರ-ಪರವೂರಿನ ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು. ಲಿಂಗಪ್ಪ ಗೌಡ ದರ್ಖಾಸು ಕಾರ್ಯಕ್ರಮ ನಿರೂಪಿಸಿದರು.