ಪುತ್ತೂರು: ಕೊಳ್ತಿಗೆ ಅಂಗನವಾಡಿ ಕೇಂದ್ರದಲ್ಲಿ ಮಾ.20 ರಂದು ವಿಶ್ವ ಮಹಿಳಾ ದಿನಾಚರಣೆ ಮತ್ತು ಸ್ತ್ರೀ ಶಕ್ತಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಕೊಳ್ತಿಗೆ ಪೆರ್ಲಂಪಾಡಿ ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷೆ ಚಂದ್ರಾವತಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಷಣ್ಮುಖ ದೇವ ದೇವಸ್ಥಾನ ಬಾಯಂಬಾಡಿ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ ಗಂಗಾಧರ ಗೌಡ ಕೆಮ್ಮಾರ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ಸೇರಿಕೊಂಡು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂದುವರಿದಿದ್ದಾರೆ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಆರತಿ ಇವರು ಇಲಾಖೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಕೆಮ್ಮಾರ, ಗ್ರಾಮ ಪಂಚಾಯತ್ ಸದಸ್ಯೆ ವೇದಾವತಿ, ಮಾಜಿ ಸ್ತ್ರೀ ಶಕ್ತಿ ಗೊಂಚಲು ಪ್ರತಿನಿಧಿ ವಿಶಾಲಾಕ್ಷಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಯಂ ಜನಾದನ ಪೂಜಾರಿ ಶುಭ ಹಾರೈಸಿದರು. ಮಕ್ಕಳ ತಾಯಂದಿರುಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಶಿಕ್ಷಕಿಯಾದ ಭವ್ಯಶ್ರೀ, ಅಶ್ವಿನಿ, ಲತಾ, ಪೆರ್ಲಂಪಾಡಿ-೧ ಅಂಗನವಾಡಿಯ ಕಾರ್ಯಕರ್ತೆ ಪುಷ್ಪಲತಾ ಮತ್ತು ವಿಶಾಲಕ್ಷಿ ನಡೆಸಿಕೊಟ್ಟರು. ಸ್ತ್ರೀ ಶಕ್ತಿ ಸಂಘವನ್ನು ಬಿಟ್ಟ ಹಿರಿಯ ಸದಸ್ಯರಾದ ನೀತಾ ಸ್ತ್ರೀ ಶಕ್ತಿ ಸಂಘದ ಪುತ್ತಮ್ಮ, ಪುಷ್ಪಾವತಿ,ಗಿರಿಜಾ,ಶಾರದಾ ಎ ಅಮೃತ ಸ್ತ್ರೀ ಶಕ್ತಿ ಸಂಘದ ಲಲಿತಾ ಮತ್ತು ಲೀಲಾವತಿ ಇವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಅಮೃತ ಸ್ತ್ರೀ ಶಕ್ತಿ ಸಂಘದ ಸದಸ್ಯರು ಅಂಗನವಾಡಿ ಕೇಂದ್ರಕ್ಕೆ ಫ್ಯಾನ್ ಕೊಡುಗೆಯಾಗಿ ನೀಡಿದ್ದರು.
ವೇದಾವತಿ ಎ ಬಿ, ಶಾರದ ಬಿ, ಗೀತಾ ಪ್ರೇಮ, ಸತ್ಯವತಿ, ಚಂದ್ರಾವತಿ ಕೆ ವಿ, ಕವಿತಾ ನಳಿನಿ,ದಮಯಂತಿ, ಹರಿಪ್ರಸಾದ್, ಶ್ಯಾಮ್‌ಸುಂದರ್ ರೈ, ವೇದವತಿ ಕೆ., ರವಿರಾಜ್, ಬಾಲಕೃಷ್ಣ ಹಾಗೂ ಹಳೆ ವಿದ್ಯಾರ್ಥಿ ಸಂಘ ಕೊಳ್ತಿಗೆ ಅಂಗನವಾಡಿ ಕಾರ್ಯಕ್ರಮಕ್ಕೆ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಿದರು. ವೇದವತಿ ಎ ಬಿ ಕಾರ್ಯಕ್ರಮ ನಿರೂಪಣೆ, ಚಂದ್ರಾವತಿ ಕೆ ವಿ ಪ್ರಾರ್ಥನೆ, ವೇದಾವತಿ ಸ್ವಾಗತ, ಶೃತಿ ಧನ್ಯವಾದ ನಡೆಸಿಕೊಟ್ಟರು. ಚಂದ್ರಾವತಿ ಕೆ ವಿ ಮತ್ತು ದಮಯಂತಿ ಸ್ತ್ರೀ ಶಕ್ತಿ ಗೀತೆ, ಬೊಲ್ಲೆ ಪ್ರಾರ್ಥನೆ ಹಾಡಿದರು. ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ ಎ ಕಾರ್ಯಕ್ರಮ ರೂಪಿಸಿದರು. ಸಹಾಯಕಿ ಕೆ ಲೋಲಾಕ್ಷಿ ಸಹಕರಿಸಿದರು.