ಪಾಪೆಮಜಲು ಬೇಂಗತ್ತಡ್ಕ ಶ್ರೀ ಬ್ರಹ್ಮಬೈದರ್ಕಳ ಗರಡಿ ವಾರ್ಷಿಕ ನೇಮೋತ್ಸವ, ಭಜನಾ ಕಾರ್ಯಕ್ರಮ

0

ಬಡಗನ್ನೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಬೇಂಗತ್ತಡ್ಕ ಶ್ರೀ ಬ್ರಹ್ಮಬೈದರ್ಕಳ ಗರಡಿ ವಾರ್ಷಿಕ ನೇಮೋತ್ಸವವು ಮಾ.22 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು

ಮಾ.22 ರಂದು ಬೆಳಗ್ಗೆ ಗಣಪತಿ ಹೋಮ, ಶ್ರೀ ಬ್ರಹ್ಮರ ತಂಬಿಲ,  ಶ್ರೀ ನಾಗದೇವರ ತಂಬಿಲ ಸೇವೆ ನಡೆಯಿತು. ಸಂಜೆ ಶ್ರೀ ಬ್ರಹ್ಮಬೈದರ್ಕಳ ಕಿರುವಾಲು ಭಂಡಾರ ತೆಗೆದು ಬ್ರಹ್ಮರ ಗುಡಿಯಿಂದ ಕೋಟಿ ಚೆನ್ನಯರ ಗರಡಿಗೆ ತಂದು ವಿವಿಧ ನಡವಳಿಗಳು ನಡೆಯಿತು.

ಭಜನಾ ಕಾರ್ಯಕ್ರಮ:

ಸುಳ್ಯಪದವು ವನಿತಾ ಮಹಿಳಾ ಭಜನಾ ಮಂಡಳಿ ಹಾಗೂ ಪಡುಮಲೆ ವರಮಹಾಲಕ್ಷ್ಮೀ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಗಂ. 10ಕ್ಕೆ ಬೈದೇರುಗಳ ಗರಡಿ ಇಳಿಯುವುದು,  ಮೀಸೆ ಧರಿಸುವುದು ಮಾಣಿಬಾಲೆ (ಕಿನ್ನಿದಾರು) ಇಳಿಯುವುದು ಬೈದೇರುಗಳ ಸೇಟು,  ಪ್ರಸಾದ ವಿತರಣೆ ನಡೆಯಿತು.  ಬಳಿಕ ಕಂಚಿ ಕಲ್ಲಿಗೆ ಕಾಯಿ ಒಡೆಯುವ ಕಾರ್ಯಕ್ರಮ ನಡೆಯಿತು.

ಅನ್ನಸಂತರ್ಪಣೆ:

ಕಾರ್ಯಕ್ರಮದಲ್ಲಿ ಸಮಾರು 2000, ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ಅನ್ನ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ  ಆಡಳಿತ ಮೂಕ್ತೇಸರ ಕೇಶವ ಪೂಜಾರಿ ಎಂ ಎಸ್, ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಕರುಣಾಕರ ಪೆರ್ವೋಡಿ ,ಬ್ರಹ್ಮಕಲಶೋತ್ಸವ ಸಮಿತಿ  ಗೌರವಾಧ್ಯಕ್ಷ ರಾಜೀವ ರೈ ಕುತ್ಯಾಡಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಕೋಶಾದಿಕಾರಿ ಕೃತಿಕಾ ಪೆರ್ವೋಡಿ, ಸದಸ್ಯರುಗಳಾದ ರಾಘವ ಪೂಜಾರಿ ಮರತ್ತಮೂಲೆ ಪ್ರದೀಪ್  ಶಾಂತಿವನ,  ಕಾರ್ತಿಕ್ ಪೆರ್ವೋಡಿ,  ಕರುಣಾಕರ ಶಾಂತಿವನ, ಗಂಗಾಧರ ಶಾಂತಿವನ  ದಿನೇಶ್ ಕುಮಾರ್ ಗಂಗಾಧರ ಎಂ ಎಸ್ ಪಾಪೆಮಜಲು, ಸುನೀಲ್ ಕುಮಾರ್ ಪಾಪೆಮಜಲು, ನಿತೀಶ್ ಕುಮಾರ್ ಶಾಂತಿವನ, ಪ್ರಮುಖರಾದ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ,    ಆರ್.ಟಿ.ಓ ಚರಣ್ ಬೆಳ್ತಂಗಡಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ವಿಜಯ ಕುಮಾರ್ ಸೊರಕೆ ಚಾರ್ವಾಕ  ಶ್ರೀ ಕ್ಷೇತ್ರ ಗೆಜ್ಜೆಗಿರಿ  ಆಡಳಿತ ಮೂಕ್ತೇಸರ ಶ್ರೀಧರ ಪೂಜಾರಿ ಗೆಜ್ಜೆಗಿರಿ, ಸಂತೋಷ್ ಕುಮಾರ್ ರೈ ಕೈಕಾರ ಅಮ್ಮಣ ರೈ ಪಾಪೆಮಜಲು ಪುಷ್ಪಾವತಿ ಎಂ ಎಸ್ ಮುಕಂದ ಶಾಂತಿವನ ಉಮಾನಾಥ ಪೂಜಾರಿ ಮಂಗಳೂರು ಶಶಿಧರ ಕಿನ್ನಿಮಜಲು, ಹಾಗೂ ಗಣ್ಯರು, ಭಕ್ತಾಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here