ಕಡಬ: ಇಲ್ಲಿನ ಪಣೆಮಜಲು ಶ್ರೀ ಮಲೆ ಉಳ್ಳಾಕ್ಲು, ಶ್ರೀ ಮಲೆಚಾಮುಂಡಿ, ಶ್ರೀ ಪುರುಷ ದೈವ, ಸಪರಿವಾರ ದೈವಗಳು ಮತ್ತು ಕಡಬದ ಪಂಜುರ್ಲಿ ದೈವಗಳ ನೇಮೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಕೆಂಚಭಟ್ರೆ ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯರವರ ಮಾರ್ಗದರ್ಶನದಲ್ಲಿ ಮಾ.25ರಿಂದ ಮಾ.27ರವರೆಗೆ ಕಡಬ ಪಣೆಮಜಲಿನಲ್ಲಿ ನಡೆಯಲಿದೆ.
ಮಾ.೨೫ರಂದು ಬೆಳಿಗ್ಗೆ ಶ್ರೀ ನಾಗದೇವರಿಗೆ ತಂಬಿಲ, ಕೆದಂಬಾಡಿಯಲ್ಲಿ ರಕ್ತೇಶ್ವರಿ,ಗುಳಿಗ ದೈವಗಳಿಗೆ ತಂಬಿಲ, ಶ್ರೀ ಸಬ್ಬಮ್ಮ ದೇವಿ ಸನ್ನಿಧಿಯಲ್ಲಿ ಶ್ರೀ ದೇವಿಗೆ ಮಹಾಪೂಜೆ ಬಳಿಕ ಕಲ್ಮಲೆ ಗುಡ್ಡೆಯಲ್ಲಿ ಶ್ರೀ ದೈವಗಳಿಗೆ ಪೇರಾರಿ ಇಟ್ಟು ಪ್ರಾರ್ಥನೆ, ಮಧ್ಯಾಹ್ನ ತುಂಬೆತ್ತಡ್ಕದಲ್ಲಿ ಶ್ರೀ ಪುರುಷದೈವ, ಜುಮ್ರೋಳು, ಗುರುಕಾರ್ನರಿಗೆ ಅಗೇಲು ಹಾಕುವ ಕಾರ್ಯಕ್ರಮ ನಡೆಯಲಿದೆ.
ಮಾ.೨೬ರಂದು ಸಂಜೆ ಶ್ರೀ ದೈವಗಳ ಭಂಡಾರ ಚಾವಡಿಯಿಂದ ಭಂಡಾರ ಇಳಿಸಿ ಮಾಲೈ ಮಾಡದಲ್ಲಿ ಭಂಡಾರ ಏರುವುದು, ರಾತ್ರಿ ಶ್ರೀ ಮಲೆ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ನೇಮ ಹಾಗೂ ಕಡಬದ ಪಂಜುರ್ಲಿ ದೈವದ ನೇಮ ನಡೆಯಲಿದೆ. ಮಾ.೨೭ರಂದು ಬೆಳಿಗ್ಗೆ ಶ್ರೀ ಮಲೆ ಚಾಮುಂಡಿ ಪ್ರಧಾನಿ ದೈವದ ನೇಮ ಮತ್ತು ಹರಕೆ ನಡೆಯಲಿದೆ ಎಂದು ಪಣೆಮಜಲು, ಅಂಗಣ, ಕೆರೆಮುದೇಲು ಕುಟುಂಬದ ಮುಖ್ಯಸ್ಥ ಜನಾರ್ದನ ಗೌಡ ಪಣೆಮಜಲು ಮತ್ತು ನೇಮೋತ್ಸವ ಸಮಿತಿಯ ಅಧ್ಯಕ್ಷ ಗಣಪಯ್ಯ ಗೌಡ ಅಂಙಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ