ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ ವಿದ್ಯಾರ್ಥಿ ಚೈತನ್ಯ ಡಿ.ಎಂ. ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ

0

ಕಡಬ: ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಇದರ ಆಡಳಿತಕ್ಕೊಳಪಟ್ಟ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ, ಕೊಂಬಾರು ಗ್ರಾಮದ ಡಮ್ಮಡ್ಕ ಮೋಹಾನಂದ ಮತ್ತು ನೇತ್ರಾವತಿ ಇವರ ಪುತ್ರಿ ಕುಮಾರಿ ಚೈತನ್ಯ ಡಿ.ಎಂ ಇವರು ಛತ್ತೀಸ್ ಗಡ ಭಿಲ್ಲೈ ಎಂಬಲ್ಲಿ ಮಾ.28ರಿಂದ ಮಾ.30ರವರೆಗೆ ತ್ರೋಬಾಲ್ ಎಸೋಸಿಯೇಷನ್(ರಿ) ಕರ್ನಾಟಕ ಇದರ ವತಿಯಿಂದ ನಡೆಯಲಿರುವ 32ನೇ ಸಬ್ ಜೂನಿಯರ್ ವಿಭಾಗದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆ, ಅಂತರಾಷ್ಟ್ರೀಯ ತ್ರೋಬಾಲ್ ಕ್ರೀಡಾಪಟು ಪೂರ್ಣಿಮಾ ಪಿ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಿನಯ ಕೆ. ಇವರು ಮಾರ್ಗದರ್ಶನ ನೀಡಿದ್ದಾರೆ. ಹಾಗೂ ಶಾಲಾ ಆಡಳಿತ ಮಂಡಳಿ, ಶಾಲಾ ಪ್ರಾಕ್ತನ ವಿದ್ಯಾರ್ಥಿ ಸಂಘ ಹಾಗೂ ಶಾಲಾ ನವನೀತ ಕ್ರೀಡಾಸಂಘದವರು ಇವರ ಸಂಪೂರ್ಣ ಖರ್ಚು – ವೆಚ್ಚಗಳನ್ನು ಭರಿಸಲಿದ್ದಾರೆ. ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳವರು, ಶಾಲಾ ಸಂಚಾಲಕರಾದ ಸುದರ್ಶನ ಜೋಯಿಸರು, ಕಾರ್ಯದರ್ಶಿ ಕೃಷ್ಣಶರ್ಮ, ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು, ಪ್ರಾಕ್ತನ ವಿದ್ಯಾರ್ಥಿಗಳು ಹಾಗೂ ನವ ನೀತ ಕ್ರೀಡಾ ಸಂಘದ ಪದಾಧಿಕಾರಿಗಳು ಇವರಿಗೆ ಶುಭವನ್ನು ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here