ಪುತ್ತೂರು: ಕೃಷಿಯ ಬಗ್ಗೆ ಉತ್ಸಾಹ ಕಡಿಮೆಯಾಗುತ್ತಿರುವ ಗಂಭಿರ ಪರಿಸ್ಥಿತಿಯ ನಡುವೆ ಜನರಲ್ಲಿ ಕೃಷಿಯ ಒಲವು ಮೂಡಿಸುವ ಹಾಗೂ ಕೃಷಿಯ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಅರಿವು ಕೃಷಿ ಕೇಂದ್ರವು ವಿವಿಧ ತರಬೇತಿ ಕಾರ್ಯಗಾರಗಳನ್ನು ನಡೆಸುತ್ತಾ ಬರುತ್ತಿದೆ. ಇದರಲ್ಲಿ ಜೇನು ಸಾಕಣಿಕೆಯೂ ಒಂದಾಗಿದೆ. ಅದರಂತೆ, ಮಾ.23 ಭಾನುವಾರದಂದು ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್ ಕಟ್ಟಡದಲ್ಲಿರುವ ಸುದ್ದಿ ಕೃಷಿ ಸೇವಾ ಕೇಂದ್ರದಲ್ಲಿ ಜೇನು ತರಬೇತಿ ನಡೆಯಿತು.

ರಾಜ್ಯಮಟ್ಟದ ಜೇನು ಕೃಷಿ ತರಬೇತುದಾರ ರಾಧಕೃಷ್ಣ ಆರ್ ಕೋಡಿ ಅವರು ತರಬೇತಿ ನೀಡಿದರು. ಜೇನು ಸಾಕಾಣಿಕೆ ಮತ್ತು ಜೇನು ನೊಣಗಳ ಪರಾಗದಿಂದ ಕೃಷಿಗೆ ಆಗುವ ಲಾಭಗಳ ಕುರಿತು ಮಾಹಿತಿ ನೀಡಿದರು.

ತರಬೇತಿಯಲ್ಲಿ ರಮಾನಾಥ ರೈ ಕುಂಬ್ರ, ವಿಠ್ಠಲ್ ರೈ ತಿಂಗಳಾಡಿ, ಮನೀಶ್ ಕೆಮ್ಮಾಯಿ, ಉಮೇಶ್ ಸಾಲೆತ್ತೂರು, ರಾಧಾಕೃಷ್ಣ ಮುರ, ಲಲಿತ ಹುದೇರಿ ಕೃಷ್ಣನಗರ, ಕೆ ವಾಸುದೇವ ಮಯ್ಯ ಕೊಡಿಪ್ಪಾಡಿ, ಆಶಾಲತಾ ಕೃಷ್ಣನಗರ, ನಟೇಶ್ ವೇಣೂರು, ವಿಶ್ವನಾಥ ರೈ ಕುಂತೂರು, ಪ್ರಸಾದ್ ಸುಳ್ಯ, ರಮಾನಂದ ಹಿರೇಬಂಡಾಡಿ, ಚಿದಾನಂದ ಗೌಡ ಕುಂಬ್ರ, ಚೆನ್ನಪ್ಪ ಒಳಮೊಗ್ರು, ಗಣೇಶ್ ಆಲಂಕಾರು, ಮಂಜುನಾಥ್ ಪುಣಚ, ರಮೇಶ್ ಆಲಂಕಾರು, ಪದ್ಮಯ್ಯ ಗೌಡ ಹಿರೇಬಂಡಾಡಿ, ಬಾಲಕೃಷ್ಣ ಬಂಟ್ವಾಳ, ದೀಪ್ತಿ ರಘುನಾಥ್ ಪುರುಷರಕಟ್ಟೆ, ಚಂದ್ರಶೇಖರ್ ನೆಲ್ಯಾಡಿ, ಮನೋಹರ ಎಂ ರಾಮಕುಂಜ, ಶಿವರಾಮ ಪುತ್ತೂರು, ಅಬೂಬಕ್ಕರ್ ಈಶ್ವರಮಂಗಲ, ಲಲಿತ ಸಾವಿತ್ರಿ ಗೊಳಿತೊಟ್ಟು, ಪ್ರಭಾಕರ್ ಕರ್ನೂರು ಭಾಗವಹಿಸಿದರು. ಕೃಷಿ ಕೇಂದ್ರದ ಹರಿಣಾಕ್ಷಿ ಸ್ವಾಗತಿಸಿ ವಂದಿಸಿದರು. ಚೈತ್ರಾ ಮಧುಚಂದ್ರ ಸಹಕರಿಸಿದರು.
ಜೇನು ಕುಟುಂಬ ಮತ್ತು ಜೇನು ಪೆಟ್ಟಿಗೆ ಬೇಕಾದಲ್ಲಿ ಏ. 05 ರ ಒಳಗಾಗಿ ಬುಕ್ಕಿಂಗ್ ಮಾಡಬಹುದು. ಆಸಕ್ತರು 6364570738, 8050293990 ಸಂಪರ್ಕಿಸಿ.