ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 8ನೇ ವಾರ್ಷಿಕೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

0


*ದೇವರ ಪ್ರಸಾದವಾಗಿ ಯಕ್ಷಗಾನವನ್ನು ವೀಕ್ಷಿಸಿ ಹುರಿದುಂಬಿಸೋಣ-ಈಶ್ವರ ಭಟ್ ಪಂಜಿಗುಡ್ಡೆ
*ಯಕ್ಷಗಾನ ಉಳಿಸಿ ಬೆಳೆಸಿದ್ದು ಬಂಟ ಸಮುದಾಯ-ಭಾಸ್ಕರ ಬಾರ್ಯ
*ಜಾತ್ರೋತ್ಸವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ-ಕರುಣಾಕರ್ ರೈ
*ಪಟ್ಲ ಸತೀಶ್ ಶೆಟ್ಟಿಯವರ ಮಾನವೀಯ ಸೇವೆಗೆ ನಾವೆಲ್ಲಾ ಕೈಜೋಡಿಸೋಣ-ಜೈರಾಜ್ ಭಂಡಾರಿ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 8ನೇ ವಾರ್ಷಿಕೋತ್ಸವ ಸಮಾರಂಭವು ಎ.10 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಮಾ.24 ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಅಪರಾಹ್ನ ದರ್ಬೆ ಅಶ್ವಿನಿ ಹೊಟೇಲ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.


ದೇವರ ಪ್ರಸಾದವಾಗಿ ಯಕ್ಷಗಾನವನ್ನು ವೀಕ್ಷಿಸಿ ಹುರಿದುಂಬಿಸೋಣ-ಈಶ್ವರ ಭಟ್ ಪಂಜಿಗುಡ್ಡೆ:
ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕರು ಪೂಜಾವಿಧಿಯನ್ನು ನೆರವೇರಿಸಿದರು. ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಪ್ರಥಮ ದಿನವೇ ದೇವಸ್ಥಾನದ ವಠಾರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ ಮಾತ್ರವಲ್ಲ ಕಲಾ ಪ್ರೇಕ್ಷಕರಿಗೆ ಯಕ್ಷಗಾನವನ್ನು ಪ್ರಸ್ತುತಪಡಿಸುತ್ತಿದೆ. ಯಕ್ಷಗಾನ ಎಂಬುದು ಗಂಡು ಕಲೆ. ಹಿರಿಯರಿಂದ ಪ್ರಾರಂಭಗೊಂಡ ಈ ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕೆಲಸವನ್ನು ಮಾಡುತ್ತಾ ಬರುತ್ತಿದೆ. ನಾವೆಲ್ಲರೂ ದೇವರ ಪ್ರಸಾದ ಎಂಬಂತೆ ಯಕ್ಷಗಾನವನ್ನು ವೀಕ್ಷಿಸಿ ಹುರಿದುಂಬಿಸೋಣ ಎಂದರು.


ಯಕ್ಷಗಾನ ಉಳಿಸಿ ಬೆಳೆಸಿದ್ದು ಬಂಟ ಸಮುದಾಯ-ಭಾಸ್ಕರ ಬಾರ್ಯ:
ದರ್ಬೆ ಅಶ್ವಿನಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಅರ್ಥಧಾರಿ ಭಾಸ್ಕರ ಬಾರ್ಯರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಜಾತ್ರೋತ್ಸವದ ಕೊಡಿ ಏರುವ ದಿನದಂದು ಪುತ್ತೂರು ಘಟಕದಿಂದ ಯಕ್ಷಗಾನ ಬಯಲಾಟ ನಡೆಯುತ್ತದೆ. ಯಕ್ಷಗಾನ ಉಳಿಸಿ ಬೆಳೆಸಿದ್ದು ಬಂಟ ಸಮುದಾಯ. ಕಟೀಲ್ ಮೇಳದ ಉಸ್ತುವಾರಿ ನೋಡಿಕೊಳ್ಳುವುದು ಬಂಟ ಸಮುದಾಯವೇ. ಯಾಕೆಂದರೆ ಬಂಟ ಸಮುದಾಯಕ್ಕೆ ಯಕ್ಷಗಾನದ ಬಗ್ಗೆ ಆಸಕ್ತಿ ಇದೆ ಜೊತೆಗೆ ತಾಕತ್ತು ಇದೆ. ವೇದಗಳ ಸಾರ ನೀಡುವುದು ಯಕ್ಷಗಾನ ಜೊತೆಗೆ ನವರಸಗಳನ್ನು ಕಾಲಕಾಲಕ್ಕೆ ಕೊಟ್ಟದ್ದು ಕೂಡ ಯಕ್ಷಗಾನ ಎಂಬ ಅಪೂರ್ವ ಕಲೆಯಾಗಿದ್ದು ಈ ಕಲೆಗೆ ಎಲ್ಲರ ಬೆಂಬಲವಿರಲಿ ಎಂದರು.


ಜಾತ್ರೋತ್ಸವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ-ಕರುಣಾಕರ್ ರೈ:
ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ್ ರೈ ದೇರ್ಲ ಮಾತನಾಡಿ, ಸತೀಶ್ ಪಟ್ಲರವರ ನೇತೃತ್ವದಲ್ಲಿ ಪಟ್ಲ ಫೌಂಡೇಶನ್ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಾ ಬಂದಿದೆ. ನಮ್ಮ ಪುತ್ತೂರು ಘಟಕವು ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಬಾರಿಯ ಜಾತ್ರೋತ್ಸವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.


ಪಟ್ಲ ಸತೀಶ್ ಶೆಟ್ಟಿಯವರ ಮಾನವೀಯ ಸೇವೆಗೆ ನಾವೆಲ್ಲಾ ಕೈಜೋಡಿಸೋಣ-ಜೈರಾಜ್ ಭಂಡಾರಿ:
ಪಟ್ಲ ಫೌಂಡೇಶನ್ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, 2017ರಲ್ಲಿ ಪುತ್ತೂರು ಘಟಕದ ಆರಂಭ. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ವಾರ್ಷಿಕೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಬೇರೆ ಕಡೆ ಆಚರಿಸಿದ್ದು, ಬಳಿಕ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಆಚರಿಸುತ್ತಿದ್ದೇವೆ. ಪಟ್ಲ ಫೌಂಡೇಶನ್ ನ 40 ಘಟಕಗಳಲ್ಲಿ ನಮ್ಮ ಘಟಕವು ಅತ್ತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪಟ್ಲ ಫೌಂಡೇಶನ್ ನಿಂದ ಅಶಕ್ತ ಕಲಾವಿದರಿಗೆ ನೆರವು ನೀಡುವ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಈ ಬಾರಿಯ ವಾರ್ಷಿಕೋತ್ಸವವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ, ಪಟ್ಲ ಸತೀಶ್ ಶೆಟ್ಟಿಯವರ ಮಾನವೀಯ ಸೇವೆಗೆ ನಾವೆಲ್ಲಾ ಕೈಜೋಡಿಸೋಣ ಎಂದರು.

 ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರೈ ಮುಂಡಾಳಗುತ್ತು, ಉಪಾಧ್ಯಕ್ಷ ನುಳಿಯಾಲು ರವೀಂದ್ರ ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ಜೆ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ರೈ ಬಿ, ಕೋಶಾಧಿಕಾರಿ ಪ್ರೊ|ದತ್ತಾತ್ರೇಯ ರಾವ್, ಸದಸ್ಯರಾದ ಎಂ.ಆರ್ ಜಯಕುಮಾರ್ ರೈ ಮಿತ್ರಂಪಾಡಿ, ಗಣೇಶ್ ರೈ ಡಿಂಬ್ರಿ, ಉದಯ ವೆಂಕಟೇಶ್ ಭಟ್, ಶ್ರೀಮತಿ ಭಾರತಿ ರೈ ಅರಿಯಡ್ಕ, ಭಾಸ್ಕರ ಬಾರ್ಯ, ಸದಾಶಿವ ರೈ ಬೆಳ್ಳಿಪ್ಪಾಡಿ, ಸತೀಶ್ ತುಂಬೆ, ಪಿ.ಸುಬ್ರಹ್ಮಣ್ಯ ಭಟ್ ಪೆರ್ವೋಡಿ, ಸೋಮಶೇಖರ್ ರೈ ಇಳಂತಾಜೆ,  ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರ ಬೆಡೇಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ವಿನಯ ಕುಮಾರ್ ಸುವರ್ಣ, ಮಹಾಬಲ ರೈ ವಳತ್ತಡ್ಕ, ಕೃಷ್ಣವೇಣಿ, ಪ್ರಮುಖರಾದ ನಗರಸಭಾ ಸದಸ್ಯ ಪಿ.ಜಿ ಜಗನ್ನೀವಾಸ್ ರಾವ್, ಭವಿನ್ ಸಾವ್‌ಜಾನಿ, ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು, ವಸಂತ ಜಾಲಾಡಿ, ವೀಣಾ ಬಿ.ಕೆ, ಕೃಷ್ಣವೇಣಿ ಕೆ.ರೈ, ಸ್ವರ್ಣಲತಾ ಜೆ.ರೈ, ವಿಶ್ವನಾಥ ನಾಯ್ಕ್, ಶಿವಪ್ರಸಾದ್ ಶೆಟ್ಟಿ, ಶರತ್ ಕುಮಾರ್ ರೈ, ಮಲ್ಲಿಕಾ ಜೆ.ರೈ, ಡಾ.ರಾಜೇಶ್ ಬೆಜ್ಜಂಗಳ, ಗಣೇಶ್ ರೈ ಡಿಂಬ್ರಿ, ಗೀತಾ ಡಿ.ರೈ, ಜಯಲಕ್ಷ್ಮಿ ಆರ್.ರೈ, ಎಂ.ಮೋಹನ್ ರೈ ನರಿಮೊಗರು, ಅಮ್ಮಣ್ಣ ಡಿ.ದೇರ್ಲ, ತಾರಾ ಜೆ‌ ಭಂಡಾರಿ, ಸಾರಿಕಾ ಟಿ.ರೈ ಸಹಿತ ಹಲವರು ಉಪಸ್ಥಿತರಿದ್ದರು.ಬಾಕ್ಸ್ದಕ್ಷಾಧ್ವರ-ಗಿರಿಜಾ ಕಲ್ಯಾಣ ಯಕ್ಷಗಾನ..ಪಟ್ಲ ಸತೀಶ್ ಶೆಟ್ಟಿರವರ ನೇತೃತ್ವದಲ್ಲಿ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಜನಪ್ರಿಯ ಕನ್ನಡ ಪ್ರಸಂಗ ‘ದಕ್ಷಾಧ್ವರ-ಗಿರಿಜಾ ಕಲ್ಯಾಣ’ ಪೌರಾಣಿಕ ಪುಣ್ಯ ಕಥಾನಕ ಯಕ್ಷಗಾನ ಸಂಜೆ ನಡೆಯಲಿದೆ. ಯಕ್ಷಗಾನದ ಮೊದಲು ಗಣ್ಯ ಅತಿಥಿಗಳಿಂದ ಸಭಾ ಕಾರ್ಯಕ್ರಮ ನೆರವೇರಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here