ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ- ಹಸಿರು ಹೊರೆ ಕಾಣಿಕೆ ಮೆರವಣಿಗೆ

0

ಕೆಯ್ಯೂರು : ಕೆಯ್ಯೂರು ಗ್ರಾಮದ ಕೆಯ್ಯೂರು ಶ್ರೀ ಮಹಿಷಮರ್ದಿನಿ  ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾ.24ರಂದು ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಹಸಿರು ಹೊರ ಕಾಣಿಕೆ ಸಮರ್ಪಣೆ ನಡೆಯಿತು.

ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು ,ಹಸಿರು ಹೊರೆಕಾಣಿಕೆ ಸಂಚಾಲಕ ಶರತ್ ಕುಮಾರ್ ಮಾಡಾವು ಮಹಾದ್ವಾರ ಬಳಿ  ತೆಂಗಿನಕಾಯಿ ಒಡೆಯುವ ಮೂಲಕ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಕೆಯ್ಯೂರು ಮಹಾದ್ವಾರದ ಬಳಿಯಿಂದ ಕೆಯ್ಯೂರು ದೇವಲಾಯದ ತನಕ  ಚೆಂಡೆ ಕುಣಿತ, ಮತ್ತು ಶ್ರೀ ದುರ್ಗಾ ಪರಮೇಶ್ವರೀ ಭಜನಾ ತಂಡ ಕೆಯ್ಯೂರು, ಶ್ರೀ ರಾಮ ಕುಣಿತ ಭಜನಾ ತಂಡ ಕೆಯ್ಯೂರು,  ಇವರಿಂದ ಭಜನಾ ಕುಣಿತ ನಡೆದು  ಭಕ್ತಾದಿಗಳು ನೀಡಿದ ಹೊರ ಕಾಣಿಕೆಯನ್ನು ಬಹಳ ವಿಜೃಂಭಣೆಯಿಂದ, ಮೆರವಣಿಗೆಯಲ್ಲಿ ಸಾಗಿ  ಪ್ರದಾನ ಅರ್ಚಕರಾದ ಶ್ರೀನಿವಾಸ ರಾವ್, ಆರತಿ ಬೆಳಗಿಸಿ  ದೇವರಿಗೆ ಸಮರ್ಪಿಸಿದರು.

ನಂತರ ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಹಾಗಣಪತಿ ಹೋಮ, ಚಂಡಿಯಾಗ ಪ್ರಾರಂಭಗೊಂಡು, ಮದ್ಯಾಹ್ನ  ಮಹಾಗಣಪತಿ ಹೋಮ ಮತ್ತು ಚಂಡಿಕಾಯಾಗದ ಪೂರ್ಣಾಹುತಿ ನಡೆದು ಶ್ರೀ ದೇವರಿಗೆ ಸಾನಿದ್ಯ ಕಲಶಾಭಿಷೇಕ ನಡೆದು, ಮಹಾಪೂಜೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೇವಲಯದ ಮಾಜಿ ಆಡಳಿತ ಮೊಕ್ತೇಶರಾದ ಶಶಿಧರ ರಾವ್ ಬೊಳಿಕಲ, ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯ ರಾದ, ಜಲಜಾಕ್ಷಿ  ಎ.ರೈ ಸಾಗು, ಸುಜಯ ಕೆಯ್ಯೂರು , ಉಮಾಕಾಂತ್ ಬೈಲಾಡಿ, ಕೆ.ಎಸ್. ಚಂದ್ರಶೇಖರ ಪೂಜಾರಿ ಕಣಿಯಾರು, ಅಶೋಕ ರೈ ದೇರ್ಲ, ದಾಮೋದರ ಪೂಜಾರಿ ಕೆಂಗುಡೇಲು, ಹರಿನಾಥ ನಾಯ್ಕ್ ಇಳಂತಾಜೆ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಚೆನ್ನಪ್ಪ ರೈ ದೇರ್ಲ, ಸದಸ್ಯರಾದ ಎನ್.ದಿವಾಕರ ರೈ ಸಣಂಗಳ, ಇ.ಸಂತೋಷ್ ಕುಮಾರ್ ರೈ ಇಳಂತಾಜೆ,    ರಾಮಣ್ಣ ಗೌಡ ಮಾಡಾವು, ವಿಶ್ವನಾಥ ರೈ ಸಾಗು, ಬಾಬು ಪಾಟಾಳಿ ದೇರ್ಲ, ಪದ್ಮನಾಭ ಪಿ ಎಸ್ ಪಲ್ಲತ್ತಡ್ಕ, ಚರಣ್ ಕುಮಾರ್ ಸಣಂಗಳ, ಮಮತಾ ಎಸ್, ರೈ ಕೆಯ್ಯೂರು ,ಜಾತ್ರೋತ್ಸವದ ಉಪ ಸಮಿತಿಗಳ ಸಂಚಾಲಕರಾದ,ಆಹಾರ ಸಮಿತಿ ಸಂಚಾಲಕ ಜಯಂತ ಪೂಜಾರಿ ಕೆಂಗುಡೇಲು ಮತ್ತು ಸದಸ್ಯರು, ಚಪ್ಪರ ಸಮಿತಿ ಸಂಚಾಲಕ ಬೇಬಿ ಪೂಜಾರಿ ದೇರ್ಲ ಮತ್ತು ಸದಸ್ಯರು, ಆಮಂತ್ರಣ ವಿತರಣಾ ಸಮಿತಿ ಸಂಚಾಲಕ ದೇವಣ್ಣ ನಾಯ್ಕ ಮತ್ತು ಸದಸ್ಯರು,  ವೈದಿಕ ಸಮಿತಿ ಸಂಚಾಲಕ ರಾಮಕೃಷ್ಣ ಭಟ್ ಮೇರ್ಲ ಮತ್ತು ಸದಸ್ಯರು, ಸ್ವಚ್ಛತಾ ಸಮಿತಿ ಸಂಚಾಲಕ ಆನಂದ ರೈ ದೇವಿ ನಗರ ಮತ್ತು ಸದಸ್ಯರು,ಅಲಂಕಾರ ಸಮಿತಿ  ಪ್ರವೀಣ್ ಕಟ್ಟತ್ತಾರು ಮತ್ತು ಸದಸ್ಯರು, ವಾಹನ ನಿಲುಗಡೆ ಸಮಿತಿ ಸಂಚಾಲಕ ಆದರ್ಶ್ ರೈ ಕೆಯ್ಯೂರು ಮತ್ತು ಸದಸ್ಯರು,  ಭಕ್ತಾದಿಗಳಾದ ಡಾ. ಶಿವಪ್ರಸಾದ್ ಶೆಟ್ಟಿ, ಚಂದ್ರಶೇಖರ ರೈ ಇಳಂತಾಜೆ,  ಹರಿಕೃಷ್ಣ ಭಟ್, ಗಣೇಶ್ ಭಟ್ ಕೈತ್ತಡ್ಕ, ರಘರಾಮ್ ಭಟ್, ವೆಂಕಟೇಶ್ವರ ಭಟ್, ಶ್ರೀಪತಿ ಭಟ್ ಕೆಯ್ಯೂರು, ಮಧುಸೂದನ್ ಭಟ್ ಕಜೆಮೂಲೆ, ಶ್ಯಾಂ ಭಟ್, ಸುರೇಂದ್ರ ರೈ ಇಳಂತಾಜೆ, ಬಟ್ಯಪ್ಪ ರೈ ದೇರ್ಲ, ಮೀನಾಕ್ಷಿ ವಿ. ರೈ,  ಅಮರನಾಥ ರೈ ದೇರ್ಲ, ಅಮ್ಮಣ್ಣ ರೈ ದೇರ್ಲ,  ತಾರಾನಾಥ ಕಂಪ , ಶಿವಶ್ರೀ ರಂಜನ್ ರೈ ದೇರ್ಲ, ವಿನಿತ್ ರೈ ದೇರ್ಲ,  ಸೇದು ಮಾಧವನ್ ನಂಬಿಯಾರ್, ಪದ್ಮನಾಭ ರೈ ಇಳಂತಾಜೆ, ಮೋಹನ್ ರೈ ಬೇರಿಕೆ ಪ್ರಕಾಶ್ ರೈ ಬಲಕ್ಕ, ಕೊರಗಪ್ಪ ರೈ ಸಣಂಗಳ, ಮಹಾಲಿಂಗ ಶೆಟ್ಟಿ ಕೆಯ್ಯೂರು ,ಕೃಷ್ಣಪ್ರಸಾದ್ ರೈ ಕಣಿಯಾರು, ರಾಧಾಕೃಷ್ಣ ರೈ ಸಣಂಗಳ, ಅಕ್ಷಯ್ ರೈ ದಂಬೆಕಾನ, ಗುಡ್ಡಪ್ಪ ರೈ ಕೋರಿಕಾರ್, ನಾರಾಯಣ ಪೂಜಾರಿ ಕಣಿಯಾರು, ಗೋಪಾಲ ಪೂಜಾರಿ ಕಣಿಯಾರು, ಧರ್ಮಣ್ಣ ಮಾಡಾವು, ರಾಕೇಶ್ ಬೊಳಿಕಲ, ಕರುಣಾಕರ ರೈ ಸಣಂಗಳ, ಸತೀಶ್ ರೈ ದೇವಿನಗರ, ದೇವಪ್ಪ ಪಲ್ಲತಡ್ಕ,ಶೇಷಪ್ಪ ದೇರ್ಲ, ರವಿ ಕೈತ್ತಡ್ಕ, ಶಶಿಧರ ಪಾಟಾಳಿ ಮೇರ್ಲ, ಚಂದ್ರಶೇಖರ ಪೂಜಾರಿ, ಕೊರಗಪ್ಪ ಪೂಜಾರಿ, ಸಂದೀಪ್ ದಟ್ಟ ಅಜಿತ್ ರೈ ಕೆಯ್ಯೂರು, ದಿನೇಶ್ ಆಚಾರ್ಯ, ಸತೀಶ್ ಪೂಜಾರಿ ಕಣಿಯಾರು, ಗಣೇಶ್ ರೈ ಕೆಯ್ಯೂರು, ರುಕ್ಮಯ್ಯ ಗೌಡ, ದೇವಪ್ಪ ಪಲ್ಲತ್ತಡ್ಕ,   ರಘನಾಥ ಗೌಡ ಕೆಯ್ಯೂರು, ಶ್ರೀಧರ ಪುಜಾರಿ ಕೊಡಂಬು,  ಚಂದ್ರಶೇಖರ ರೈ ನಡುಮನೆ  ಶೇಸಪ್ಪ ಗೌಡ, ಮೋನಪ್ಪ ಅಜಿಲ ಕೆಯ್ಯೂರು, ದಾಮೋದರ ಅಜಿಲ ಕಣಿಯಾರು, ಕಿಟ್ಟ ಅಜಿಲ ಕಣಿಯಾರು, ವಿನಯ ಕೊಡ್ಲೆ,  ಪ್ರಜ್ವಲ್ ಕೊಡ್ಲೆ, ದಿನೇಶ್ ಕೆ ಎಸ್, ದಿಲೀಪ್ ಕೆ ಎಸ್,  ಕೃಷ್ಣ ಸಾಮಾನಿ ಕೆಯ್ಯೂರು, ಪ್ರಮೀತ್ ರಾಜ್ ಕಟ್ಟತ್ತಾರು,ಮಂಜುಳಾ ಮಾಡಾವು, ಲಲಿತಾ ರೈ ಮಾಡಾವು, ಹರೀಶ್ ಕಣಿಯಾರು, ಅಮರನಾಥ ರೈ ನೂಜಿ, ದೇವಾಲಯದ ನೌಕರ ಜಯಂತ್ ಕುಲಾಲ್,  ಸಹಕರಿಸುವ ಸಂಘ ಸಂಸ್ಥೆಗಳು, ಹಾಗೂ ಊರ ಹತ್ತು ಸಮಸ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here