ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ಬಿಸಿಲ ತಾಪಕ್ಕೆ ಭಕ್ತರ ಅನುಕೂಲತೆಗಾಗಿ ಶಾಮಿಯಾನವನ್ನು ಅಳವಡಿಸಲಾಗಿದೆ. ದೇವಳದ ಹೊರಾಂಗಣದಲ್ಲಿ ಭಕ್ತರು ಪಾದರಕ್ಷೆ ಕಳಚಿ ಬರಿ ಕಾಲಿನಲ್ಲಿ ಮುಂದುವರಿದಾಗ ಹೊರಾಂಗಣದ ಕಾಂಕ್ರೀಟ್ ನೆಲದ ಬಿಸಿಲಿನ ತಾಪದಿಂದ ಭಕ್ತರಿಗೆ ಆಗುವ ತೊಂದರೆಯನ್ನು ಗಮನಿಸಿದ ದೇವಳದ ವ್ಯವಸ್ಥಾಪನಾ ಸಮಿತಿಯಿಂದ ತಾತ್ಕಾಲಿಕವಾಗಿ ಶಾಮಿಯಾನದ ವ್ಯವಸ್ಥೆಯನ್ನು ಮಾಡಲಾಗಿದೆ.