SPYSS ಹಾಗೂ ಶ್ರೀ ರಾಮ ಸಮುದಾಯ ಭವನ ಶಾಖೆ ಬೆಳಿಯೂರುಕಟ್ಟೆ ಇದರ ಸಹಯೋಗ
ಪುತ್ತೂರು: ಪುತ್ತೂರು ಬೆಳಿಯೂರುಕಟ್ಟೆ ಶ್ರೀರಾಮ ಸಮುದಾಯ ಭವನ ಮಾತೃ ಪೂಜನ, ಮಾತೃ ವಂದನ,ಮಾತೃ ಧ್ಯಾನ ಮತ್ತು ಮಾತೃ ಭೋಜನ ಕಾರ್ಯಕ್ರಮ ಮಾ.23ರಂದು ಬೆಳಿಯೂರು ಶ್ರೀರಾಮ ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮ ರವಿಪ್ರಕಾಶ್ ಮತ್ತು ಇತರರ ಭಕ್ತಿ ಭಾವದ ಭಜನೆಯೊಂದಿಗೆ ಪ್ರಾರಂಭಗೊಳಿಸಿದರು.
ಪ್ರಾಂತ ಪ್ರಶಿಕ್ಷಣ ಪ್ರಮುಖರಾದ ಲಕ್ಷ್ಮೀ ನಾರಾಯಣ ಮಾತನಾಡಿ, ತಾಯಿ ಹೃದಯದ ಅಂತಕರಣ, ಮಾತೃ ಧ್ಯಾನದ ಮೂಲಕ ತಾಯಿ ಮತ್ತು ನಮ್ಮ ರಕ್ತ ಸಂಬಂಧವನ್ನು ಮತ್ತೆ ಹಸಿರಾಗಿಸಿ ನಮ್ಮ ಉಸಿರಿನಲ್ಲಿ ಬೆರೆತಿರುವುದನ್ನು ತಿಳಿಸಿದರು.

ಮುಖ್ಯ ಅಭ್ಯಾಗತರಾದ ಕನ್ಯಾಕುಮಾರಿ ತಾಯಿ ಮತ್ತು ಮಕ್ಕಳ ಅವಿನಾಭಾವ ಸಂಬಂಧ ಮತ್ತು ಸಮಿತಿಯ ಕಾರ್ಯಕ್ರಮದ ಅವಶ್ಯಕತೆಯ ಅರಿವನ್ನು ತಿಳಿಸಿದರು.ಅಧ್ಯಕ್ಷತೆಯನ್ನು ವಹಿಸಿದ ಸೌಮ್ಯ ಅವರು ದೀಪ ಬೆಳಗಿಸಿ ಮಾತನಾಡಿ, ಯೋಗದ ಬೆಳಕನ್ನು ಇನ್ನಷ್ಟು ನಾಗರೀಕ ಬಂಧುಗಳಿಗೆ ಹಂಚುವ ಕಾರ್ಯ ಮಾಡೋಣ ಎಂದರು.

ಪುತ್ತೂರು ತಾಲೂಕಿನ ಮತ್ತು ಬೆಳಿಯೂರು ಕಟ್ಟೆ ಪರಿಸರದ ನಿವಾಸಿಗಳು ಮತ್ತು ನಾಗರೀಕ ಬಂಧುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 365ಮಂದಿ ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಮಹಿಮಾ ಪ್ರಾರ್ಥಿಸಿ,ಶ್ರುತಿ ಸ್ವಾಗತಿಸಿ, ಪವಿತ್ರ ನಿರೂಪಿಸಿ,ಉಷಾ ವರದಿ ವಾಚಿಸಿದರು.