ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಪುತ್ತೂರು ಇದರ ವತಿಯಿಂದ 19ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಅರ್ಚಕರಾದ ಜಗದೀಶ ಶಾಂತಿಯವರ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನಗಳೊಂದಿಗೆ ಜರಗಿತು.
ಪ್ರಾತಃಕಾಲ ಬೆಳಿಗ್ಗೆ ಗಂಟೆ 6ರಿಂದ ಸ್ವಸ್ತಿ ಪುಣ್ಯಾಹ, 7ರಿಂದ ಗಣಹೋಮ, 7.30 ರಿಂದ ನವಕ ಕಲಶಾಭಿಷೇಕ, 8 ರಿಂದ ಬ್ರಹ್ಮಶ್ರೀ ನಾರಾಯಣಗುರು ಸಹಸ್ರನಾಮಾವಳಿ, 9.30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1 ರಿಂದ ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನ ನಡೆಯಿತು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಗ್ರಾಮ ಸಮಿತಿಗಳು, ಬಿಲ್ಲವ ಮಹಿಳಾ ವೇದಿಕೆ ಪುತ್ತೂರು, ಯುವವಾಹಿನಿ ಪುತ್ತೂರು, ಉಪ್ಪಿನಂಗಡಿ, ಕಡಬ ಘಟಕಗಳು, ಬಿಲ್ಲವ ವಿದ್ಯಾರ್ಥಿ ಸಂಘ ಪುತ್ತೂರು, ತಾಲೂಕಿನ ಮೂರ್ತೆದಾರರ ಸೇವಾ ಸಹಕಾರಿ ಸಂಘಗಳು ಸಹಕಾರ ನೀಡಿರುತ್ತಾರೆ.

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕಾರ್ಯದರ್ಶಿ ಚಿದಾನಂದ ಸುವರ್ಣ, ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಶ್ರೀಮತಿ ವಿಮಲ ಸುರೇಶ್, ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರಾ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್ ಹಾಗೂ ಸರ್ವ ಸದಸ್ಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ಸದಸ್ಯರಾದ ಸಜ್ಜನ್ ಕುಮಾರ್ ಕನ್ನಾರ್‌ನೂಜಿ, ರಾಜೇಶ್ ಪೂಜಾರಿ ಪಾಣಾಜೆ, ಉಮೇಶ್ ಬಾಯಾರ್‌ರವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಶ್ರದ್ಧಾಭಕ್ತಿಯ ಕಾರ್ಯದಲ್ಲಿ ಪಾಲ್ಗೊಂಡರು.