ವಿಟ್ಲ : ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಮಾ.23ರಂದು ಪ್ರತಿಷ್ಠಾ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ ಹಾಗೂ ಅರ್ಧಏಕಾಹ ಭಜನೆ ನಡೆಯಿತು.
ಮಾ.23ರಂದು ಬೆಳಗ್ಗೆ 6.೦೦ ರಿಂದ ಸಾಯಂಕಾಲ ಗಂಟೆ 6.೦೦ರವರೆಗೆ ಅರ್ಧ ಏಕಾಹ ಭಜನೆ ನಡೆಯಿತು. ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ರಾತ್ರಿ ಗಂಟೆ 8.೦೦ ಕ್ಕೆ ಮಂಗಳಾರತಿ , ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಮಾ.24ರಂದು ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಅಧ್ಯಕ್ಷರಾದ ಕೃಷ್ಷಕಿಶೋರ್ ಭಟ್ ಪೆಲತ್ತಿಂಜರವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಭಜನಾ ಮಂದಿರದ ಗೌರವ ಸಲಹೆಗಾರರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಮಾತನಾಡಿ ಹಿಂದೂ ಸಮಾಜದ ಧಾರ್ಮಿಕ ಕ್ಷೇತ್ರಗಳ ಅಪಪ್ರಚಾರದ ವಿರುದ್ಧ ನಾವೆಲ್ಲರೂ ಎದ್ದು ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಧಾರ್ಮಿಕ ಮುಂದಾಳು ಎಸ್. ಬಾಲಕೃಷ್ಣ ಕಾರಂತ ಎರುಂಬುರವರು ಧಾರ್ಮಿಕ ಉಪನ್ಯಾಸ ನೀಡಿ ಮಕ್ಕಳಲ್ಲಿನ ಮೊಬೈಲ್ ವ್ಯಾವೋಹವನ್ನು ಕಡಿಮೆಮಾಡಿ ಅವರಿಗೆ ಸಂಸ್ಕಾರ ಸಂಸ್ಕೃತಿ ಕಲಿಸುವ ಕೆಲಸ ಎಲ್ಲರಿಂದಲೂ ಆಗಲಿ ಎಂದರು.
ವೇದಿಕೆಯಲ್ಲಿ ವಿಟ್ಲ ಶ್ರೀ ಚಂದ್ರನಾಥ ಸ್ವಾಮೀ ಬಸದಿಯ ಅಧ್ಯಕ್ಷರಾದ ಜಿತೇಶ್ ಜೈನ್, ಚಂದಳಿಕೆ ಭಾರತ್ ಶಾಮಿಯಾನ್ ಮಾಲಕರಾದ ಸಂಜೀವ ಪೂಜಾರಿ ಚಂದಳಿಕೆ, ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾದ ಜಗದೀಶ್ ಪೂಜಾರಿ ಅಳಕೆಮಜಲು, ಮಹಿಳಾ ಸಮಿತಿ ಅಧ್ಯಕ್ಷರಾದ ಗೀತಾ ನಾಯ್ಕ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಕೃತಿ ಪ್ರಾರ್ಥಿಸಿದರು. ಭಜನಾ ಮಂದಿರದ ಪದಾಧಿಕಾರಿ ಚಿದಾನಂದ ಪೆಲತ್ತಿಂಜ ಸ್ವಾಗತಿಸಿ, ಸುಧೀರ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು, ಸಂಜೀವ ಪೆಲತ್ತಿಂದ ವಂದಿಸಿದರು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕತೆ ಎಡ್ಡೆಂಡು ತುಳು ನಾಟಕ ನಡೆಯಿತು.