ವಿಟ್ಲ: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕನ್ನಡ ಗ್ರಾಮ ಕಾಸರಗೋಡು, 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ -2025 ರಂಜಿತಾ ಮಹೋತ್ಸವ ವರ್ಷದ ‘ಚಂದ್ರಗಿರಿ ಮಹಾಜನ ಪ್ರಶಸ್ತಿಗೆ ಜಿಲ್ಲೆಯ ಮೂವರು ಬರಹಗಾರರನ್ನು ಆಯ್ಕೆ ಮಾಡಿದೆ.
ಹಿರಿಯ ಪತ್ರಕರ್ತ,ಕವಿ,ಲೇಖಕ ಗಣೇಶ ಪ್ರಸಾದ ಪಾಂಡೇಲು, ಹಿರಿಯ ಪತ್ರಕರ್ತ,ಲೇಖಕ, ಕವಿ ವಿಷ್ಣುಗುಪ್ತ ಪುಣಚ ಹಾಗೂ ಹಿರಿಯ ಕವಿ,ಲೇಖಕ ಆನಂದ ರೈ ಅಡ್ಕಸ್ಥಳ ಅವರನ್ನು ಆಯ್ಕೆ ಮಾಡಿದೆ. ಸಾಹಿತ್ಯ, ಸಾಂಸ್ಕೃತಿಕ ರಾಯಭಾರಿಯಾಗಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ.
ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾ.27ರಂದು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ರಂಜಿತಾ ಮಹೋತ್ಸವ -2025, ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.