ನಾಳೆ(ಮಾ.28ಕ್ಕೆ) ಉಪ್ಪಿನಂಗಡಿ ಜಾಕ್‌ವೆಲ್ ಸಂಪರ್ಕ ರಸ್ತೆಯಲ್ಲಿ ಪುತ್ತೂರು ನಗರಸಭೆ ಜಲಸಿರಿ ನೀರಿನ ಕೊಳವೆಗಳ ದುರಸ್ತಿ – ನೀರು ಸರಬರಾಜಿನಲ್ಲಿ ವ್ಯತ್ಯಯ ಸಾಧ್ಯತೆ

0

*ನೀರಿನ ವ್ಯತ್ಯಯದ ಕುರಿತು ಕ್ವಿಮಿಪ್ ನಿಂದ ನಗರಸಭೆ ಅಧ್ಯಕ್ಷರಿಗೆ ಪತ್ರ

  • *ರಸ್ತೆ ಸಂಚಾರ ಸ್ಥಗಿತಗೊಳಿಸಲು ನೆಕ್ಕಿಲಾಡಿ ಗ್ರಾ.ಪಂಗೆ ಪತ್ರ

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಎಡಿಬಿ ಅನುದಾನಿತ ಜಲಸಿರಿ 24/7 ಕುಡಿಯುವ ನೀರಿನ ಸರಬರಾಜು ಯೋಜನೆಗೆ ಸಂಬಂಧಿಸಿ ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿ ಸಮೀಪದ ಜಾಕ್‌ವೆಲ್ ಸಂಪರ್ಕ ರಸ್ತೆಯಲ್ಲಿ ಕೊಳವೆಗಳನ್ನು ದುರಸ್ತಿ ಮಾಡುವ ನಿಟ್ಟಿನಲ್ಲಿ ಮಾ.28ರಂದು ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯ ಆಗಲಿದೆ.
ಉಪ್ಪಿನಂಗಡಿ ಮುಖ್ಯರಸ್ತೆಯಿಂದ ಜಾಕ್‌ವೆಲ್ ಸಂಪರ್ಕ ರಸ್ತೆಯಲ್ಲಿ ಮೂರು ಕಡೆ ಹಳೆಯ ಕೊಳವೆಗಳು ಒಡೆದು ನೀರು ಪೋಲಾಗುತ್ತಿದೆ. ಇದನ್ನು ದುರಸ್ತಿ ಮಾಡಲು 6.8 ಎಂಎಲ್‌ಡಿ ನೀರು ಶುದ್ದೀಕರಣ ಘಟಕದ ನೀರು ಸರಬರಾಜು ವ್ಯವಸ್ಥೆಯಲ್ಲಿ ವಲಯ 1 ಮತ್ತು ವಲಯ 2ರಲ್ಲಿ ವ್ಯತ್ಯಯವಾಗಲಿದೆ ಎಂದು ಕೆಯುಐಡಿಎಫ್‌ಸಿ ಯ ಕ್ವಿಮಿಪ್ ಸಹಾಯಕ ಕಾರ್ಯಪಾಲಕ ಅಭಿಯಂತರರು ನಗರಸಭೆ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ರಸ್ತೆ ಸಂಚಾರ ಸ್ಥಗಿತಗೊಳಿಸಲು ಪತ್ರ:
ಪುತ್ತೂರು ನಗರಸಭೆಯ 24/7 ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿ ನೆಕ್ಕಿಲಾಡಿ ಜಾಕ್‌ವೆಲ್ ಬಳಿಯಲ್ಲಿ ಕೊಳವೆಗಳು ಒಡೆದು ಹೋಗಿರುವುದನ್ನು ದುರಸ್ಥಿ ಪಡಿಸಲು ರಸ್ತೆ ಸಂಚಾರ ಸ್ಥಗಿತಗೊಳಿಸಿ ಬೇರೆ ಸಂಚಾರ ರಸ್ತೆಯನ್ನು ಉಪಯೋಗಿಸಲು ವ್ಯವಸ್ಥೆ ಮಾಡಿಕೊಡುವಂತೆ ಕ್ವಿಮಿಪ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಪತ್ರದಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here