*ಮಾ.29-ಹೊರೆಕಾಣಿಕೆ, ಧ್ವಜಾರೋಹಣ
*ಮಾ.31-ದರ್ಶನ ಬಲಿ, ಬಟ್ಟಲುಕಾಣಿಕೆ
*ಎ.1-ಮಹಾರಥೋತ್ಸವ
*ಎ.3-ದುಗಲಾಯಿ ದೈವದ ನೇಮೋತ್ಸವ

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವ ಮಾ.29ರಿಂದ ಎ.2ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಎ.3ರಂದು ಶ್ರೀ ದುಗಲಾಯಿ ದೈವದ ನೇಮೋತ್ಸವ ನಡೆಯಲಿದೆ ಎಂದು ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಅರುವಾರ ಬಾಳಿಕೆ ಹಾಗೂ ಸದಸ್ಯರು ಮತ್ತು ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೊರಿಕ್ಕಾರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.29-ಹೊರೆಕಾಣಿಕೆ, ಧ್ವಜಾರೋಹಣ
ಮಾ.29ರಂದು ಬೆಳಿಗ್ಗೆ 9.30ಕ್ಕೆ ಶಾಲಾ ಮಕ್ಕಳಿಂದ ಹಾಗೂ ಊರವರಿಂದ ಹಸಿರುವಾಣಿ ಸಮರ್ಪಣೆ ನಡೆಯಲಿದೆ. ದೇವಸ್ಥಾನದ ಮೈದಾನದಿಂದ ಹೊರೆಕಾಣಿಕೆ ಮೆರವಣಿಗೆ ದೇವಸ್ಥಾನಕ್ಕೆ ಆಗಮಿಸಲಿದೆ. ರಾತ್ರಿ 8 ಗಂಟೆಗೆ ಧ್ವಜಾರೋಹಣ, ಬಲಿ ಹೊರಟು ಉತ್ಸವ, ಅನ್ನ ಸಂತರ್ಪಣೆ ನಡೆಯಲಿದೆ. ಮಾ.30ರಂದು ರಾತ್ರಿ 7ರಿಂದ ಬಲಿ ಹೊರಟು ಉತ್ಸವ, ಆತೂರಿನಿಂದ ಗೋಕುಲನಗರ, ಕೆ.ಸಿ.ಫಾರ್ಮ್ ತನಕ ಪೇಟೆ ಸವಾರಿ, ಕಟ್ಟೆಪೂಜೆಗಳು ನಡೆಯಲಿದೆ.
ಮಾ.31-ದರ್ಶನ ಬಲಿ, ಬಟ್ಟಲುಕಾಣಿಕೆ
ಮಾ.31ರಂದು ಪೂರ್ವಾಹ್ನ 9.30ರಿಂದ ಉತ್ಸವ ಆರಂಭವಾಗಲಿದ್ದು ಮಧ್ಯಾಹ್ನ 12ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ನಂತರ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7ಕ್ಕೆ ಬಲಿ ಹೊರಟು ಉತ್ಸವ, ಆನೆಗುಂಡಿಯವರೆಗೆ ಪೇಟೆ ಸವಾರಿ, ಆನೆಗುಂಡಿಯಲ್ಲಿ ಕೆರೆ ಉತ್ಸವ, ಕಟ್ಟೆಪೂಜೆ, ಆನೆಗುಂಡಿ ಬೂಡಿನಿಂದ ದುಗಲಾಯಿ ದೈವದ ಭಂಡಾರ ತರುವುದು, ದೇವಸ್ಥಾನದಲ್ಲಿ ರಂಗಪೂಜೆ ನಡೆಯಲಿದೆ.
ಎ.1-ಮಹಾರಥೋತ್ಸವ:
ಎ.1ರಂದು ಪೂರ್ವಾಹ್ನ 9 ಗಂಟೆಯಿಂದ ಬಲಿ ಹೊರಟು ಉತ್ಸವ, ರಾತ್ರಿ ಗಂಟೆ 7ರಿಂದ ಬಲಿ ಹೊರಟು ಉತ್ಸವ, ರಕ್ತೇಶ್ವರಿ ಮತ್ತು ಹುಲಿ ದೈವಗಳ ನುಡಿಕಟ್ಟುಗಳು, ರಾತ್ರಿ ಗಂಟೆ 9ರಿಂದ ಮಹಾರಥೋತ್ಸವ, ಬಳಿಕ ಅಶ್ವತ್ಥ ಕಟ್ಟೆಪೂಜೆಗಳು ನಡೆಯಲಿವೆ. ಎ.2ರಂದು ಪೂರ್ವಾಹ್ನ ಗಂಟೆ 7.30ರಿಂದ ಬಾಗಿಲು ತೆರೆಯುವ ಮುಹೂರ್ತ, ಮಹಾಪೂಜೆ, ರಾತ್ರಿ ಗಂಟೆ 7ರಿಂದ ಬಲಿ ಹೊರಟು ಉತ್ಸವ, ವಸಂತ ಕಟ್ಟೆಯಲ್ಲಿ ಕಟ್ಟೆಪೂಜೆಗಳು, ಕೊಯಿಲ ಶಾಲೆಯಿಂದಾಗಿ ನೀಲಮೆ ಶ್ರೀ ಮಹಾವಿಷ್ಣು ದೇವಸ್ಥಾನ, ಕುರೋಳಿಕೆ ಮೂಲಕ ಕುಮಾರಧಾರದ ಸುದೆಂಗಳದವರೆಗೆ ಪೇಟೆ ಸವಾರಿ, ಕಟ್ಟೆಪೂಜೆಗಳು, ಗುಳಿಗ ಮತ್ತು ಪಂಜುರ್ಲಿ ದೈವಗಳ ನುಡಿಕಟ್ಟುಗಳು, ಅವಭೃತೋತ್ಸವ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯಲಿದೆ.
ಎ.3-ನೇಮೋತ್ಸವ:
ಎ.3ರಂದು ಪೂರ್ವಾಹ್ನ ಗಂಟೆ 8ರಿಂದ ಸಂಪ್ರೋಕ್ಷಣೆ, ಪೂರ್ವಾಹ್ನ ಗಂಟೆ 9.30ರಿಂದ ದುಗಲಾಯಿ ದೈವದ ನೇಮೋತ್ಸವ, ಮಧ್ಯಾಹ್ನ ಗಂಟೆ 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಮಾ.29ರಂದು ರಾತ್ರಿ 7ರಿಂದ ವಿಶ್ವಗುರು ಭರತನಾಟ್ಯ ಕಲಾಶಾಲೆ ಕುರಿಯ ಇಲ್ಲಿನ ವಿದುಷಿ ಭಾಗ್ಯಶ್ರೀ ರೈ ಇವರ ಕೊಯಿಲ ಶಾಖೆಯ ಶಿಷ್ಯವೃಂದದದವರಿಂದ ನೃತ್ಯಾರ್ಪಣಾ, ರಾತ್ರಿ 8 ಗಂಟೆಯಿಂದ ಪುತ್ಯೆ ಬಳಗ ಇವರ ಪ್ರಾಯೋಜಕತ್ವದಲ್ಲಿ ಕಡಬ ಭಾರತೀಯ ಕಲೆಗಳ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ನಿನಾದ, ರಾತ್ರಿ ಗಂಟೆ 9.30ರಿಂದ 9ನೇ ವರ್ಷದ ಕಲಾಸೇವೆ ಪ್ರಯುಕ್ತ ಎಸ್‌ಆರ್‌ಕೆ ಲ್ಯಾಡರ‍್ಸ್ ಪುತ್ತೂರು ಇವರ ಪ್ರಾಯೋಜಕತ್ವದಲ್ಲಿ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ’ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ.
ಮಾ.31ರಂದು ಸಂಜೆ 6ರಿಂದ 9ರ ತನಕ ಯಕ್ಷನಂದನ ಕಲಾಸಂಘ ಗೋಕುಲನಗರ ಇವರಿಂದ ತಾಳಮದ್ದಳೆ ’ಭೀಷ್ಮ ವಿಜಯ’ ರಾತ್ರಿ ಗಂಟೆ 9ರಿಂದ ಶಿವಮೂರ್ತಿ ಮಿತ್ರವೃಂದ ದೇವಗಿರಿ, ಕೊಯಿಲ ಇವರ ಪ್ರಾಯೋಜಕತ್ವದಲ್ಲಿ 13ನೇ ವರ್ಷದ ಕಲಾಸೇವೆ ಶ್ರೀ ಲಲಿತೆ ಕಲಾವಿದರು(ರಿ.)ಮಂಗಳೂರು ಇವರಿಂದ ’ಶನಿ ಮಹಾತ್ಮೆ’ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಎ.1ರಂದು ಸಂಜೆ 6ರಿಂದ ದೇವಗಿರಿ ಬಾಲಗೋಕುಲದ (ಧಾರ್ಮಿಕ ಶಿಕ್ಷಣ)ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 10ರಿಂದ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡ್ಕ ಇವರಿಂದ ’ಜಾಜಿ ಮಲ್ಲಿಗೆ’ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.