ಪುತ್ತೂರು: ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರಿಗೆ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಮಾ.28 ರಂದು ಅಧಿಕೃತ ಭೇಟಿ ನೀಡಿ ಕ್ಲಬ್ನ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ ಬಪ್ಪಳಿಗೆ ಬೈಪಾಸ್ ಜಂಕ್ಷನ್ನಲ್ಲಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರನ್ನು ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಾಗತ ಮಾಡಲಿದ್ದಾರೆ. ಬಳಿಕ ಬೈಪಾಸ್-ಬಪ್ಪಳಿಗೆ ಜಂಕ್ಷನ್ ಬಳಿಯ ರೋಟರಿ ನಿವಾಸದಲ್ಲಿ ಕ್ಲಬ್ನ ಡೈಮಂಡ್ ಜ್ಯುಬಿಲಿ ಪ್ರಯುಕ್ತ ಹೋರ್ಡಿಂಗ್ ಅನಾವರಣ, ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ, ರಾಧಾಕೃಷ್ಣ ಬಿಲ್ಡಿಂಗ್ನಲ್ಲಿನ ಬ್ಲಡ್ ಬ್ಯಾಂಕ್ ಮತ್ತು ಕಣ್ಣಿನ ಆಸ್ಪತ್ರೆಗೆ ಭೇಟಿ, ನೆಲ್ಲಿಕಟ್ಟೆ ಶಾಲಾ ಬಳಿಯ ರೋಟರಿ ಜಿಲ್ಲಾ ಅನುದಾನ ಕಟ್ಟಡ ಉದ್ಘಾಟನೆ, ವೀಕ್ಷಣೆ, ಅಪರಾಹ್ನ ಮಹಾವೀರ ಮೆಡಿಕಲ್ ಸೆಂಟರ್ನ ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ, ರೋಟರಿ ಜಿ.ಎಲ್ ಸಭಾಭವನದಲ್ಲಿ ಕ್ಲಬ್ ಅಸೆಂಬ್ಲಿ, ದರ್ಬೆ ನಯಾ ಚಪ್ಪಲ್ ಬಝಾರ್ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾದ ಸಾರ್ವಜನಿಕರಿಗೆ ಕುಡಿಯುವ ನೀರಿನ ಘಟಕ ಉದ್ಘಾಟನೆ ನೆರವೇರಲಿದೆ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ.ಎರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ ಪುತ್ತೂರು ಹೊರ ವಲಯದಲ್ಲಿನ ದಿ ಪುತ್ತೂರು ಕ್ಲಬ್ನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರೊಂದಿಗೆ ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷ ಕುಮಾರ್ ರೈ, ವಲಯ ಸೇನಾನಿ ಮುರಳೀಧರ್ ರೈರವರು ಭಾಗವಹಿಸಲಿದ್ದಾರೆ.