*ಒಣ ಹಣ್ಣುಗಳ ಖರೀದಿಗೆ 11% ರಿಯಾಯಿತಿ…
*ಹಲವಾರು ಬಗೆಯ ಒಣ ಹಣ್ಣುಗಳು , ವಿದೇಶಿ ಚಾಕ್ಲೇಟ್ಸ್ , ಬಾಂಬೆ ಕಫೂರ್ ಕುಲ್ಫಿಗಳು ಮಳಿಗೆಯಲ್ಲಿ ಲಭ್ಯ…
*ಮಾ.31 ರಂದು ಕೊನೆಯಾಗಲಿದೆ ವಾರ್ಷಿಕೋತ್ಸವ ಕೊಡುಗೆಗಳು…
ಪುತ್ತೂರು : ಹತ್ತು ವರುಷಗಳ ಹಿಂದೆ ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಒಣಹಣ್ಣುಗಳ ಮಾರಾಟ ಮಳಿಗೆ ತೆರೆದು ,ಲಹರಿ ಬ್ರ್ಯಾಂಡ್ ಮೂಲಕ ಡ್ರೈ ಫ್ರೂಟ್ಸ್ ವ್ಯವಹಾರ ಪ್ರಾರಂಭಿಸಿ , ಉತ್ತಮ ಹೆಸರು ಗಳಿಸಿಕೊಂಡಿರುವ “ಲಹರಿ ಡ್ರೈ ಫ್ರೂಟ್ಸ್ ಆ್ಯಂಡ್ ಮೋರ್ ” ಹನ್ನೊಂದನೆಯ ವಾರ್ಷಿಕೋತ್ಸವ ಪ್ರಯುಕ್ತ ತನ್ನ ಗ್ರಾಹಕ ವರ್ಗಕ್ಕೆ 11 ದಿನಗಳ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಿದ್ದು , ಮಾ.31 ರಂದು ಈ ಕೊಡುಗೆಗಳೆಲ್ಲಾ ಕೊನೆಯಾಗುತ್ತಿವೆ. ಒಣ್ಣ ಹಣ್ಣು ಪ್ರಿಯರಿಗಾಗಿ ತನ್ನ 11ನೆಯ ವಾರ್ಷಿಕೋತ್ಸವದ ಅಂಗವಾಗಿ 11 ಶೇಕಡಾ ರಿಯಾಯಿತಿಯನ್ನು 11 ದಿನಗಳವರೆಗೆ ಆಯೋಜನೆ ಮಾಡಿ ,ಒಣ ಹಣ್ಣುಗಳ ಖರೀದಿಗೆ ಸುಲಭ ರೀತಿಯಲ್ಲಿ ಪ್ರೊತ್ಸಾಹ ಹಾಗೂ ಬೆಂಬಲವನ್ನು ಲಹರಿ ಗ್ರಾಹಕ ಜನತೆಗೆ ಒದಗಿಸಿಕೊಟ್ಟಿದೆ. ಒಣ ಹಣ್ಣುಗಳು ಕೂಡ ಔಷಧೀಯ ಗುಣಗಳು ಹೊಂದಿರುತ್ತವೆಯೆಂಬುದು ನೂರರಷ್ಟು ಸತ್ಯವಾದ ಮಾತು. ಅಲ್ಲದೇ ವಿವಿಧ ಬಗೆಯ ಒಣ ಹಣ್ಣು ಮನುಷ್ಯರ ಆರೋಗ್ಯವನ್ನು ಸದಾ ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ.

ಒಣ ಹಣ್ಣುಗಳು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವುದು ಮಾತ್ರವಲ್ಲದೇ ,ಸ್ವಾದಿಷ್ಟಭರಿತವುವಾಗಿದ್ದು ಆರೋಗ್ಯಕ್ಕೆ ಅತೀ ಪ್ರಯೋಜನಕಾರಿಯಾಗಿರುವುದರಿಂದಲೇ ಬಹಳ ಹಿಂದಿನ ಕಾಲದಿಂದಲೂ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದೆ. ಪ್ರತಿ ವೈದ್ಯರು ನಾವೆಲ್ಲ ಫಿಟ್ ಆ್ಯಂಡ್ ಹೆಲ್ದಿಯಾಗಿರಲು ಒಣ ಹಣ್ಣುಗಳ ಸೇವನೆಗೆ ಶಿಫಾರಸ್ಸು ಮಾಡುತ್ತಾರೆ. ಇವೆಲ್ಲಾ ಕಾರಣಗಳಿಂದಲೇ ಡ್ರೈ ಫ್ರೂಟ್ಸ್ ವ್ಯವಹಾರವನ್ನು ಪುತ್ತೂರಿನಲ್ಲಿ ಮೊದಲ ಬಾರಿಗೆ ಪರಿಚಯಿಸಿ , ಅತೀ ಹೆಚ್ಚು ಬಗೆಯ ಒಣ ಹಣ್ಣುಗಳ ಸಹಿತ ದೇಶ -ವಿದೇಶಗಳ ವಿವಿಧ ಬಗೆಯ ಚಾಕ್ಲೇಟ್ , ಬಾಂಬೆ ಕಫೂರ್ ಕುಲ್ಫಿಗಳನ್ನನೊಳಗೊಂಡ ಮಾರಾಟ ಮಳಿಗೆ ಇಲ್ಲಿನ ಏಳ್ಮುಡಿ ಕೆ.ವಿ.ಶೆಣೈ ಪೆಟ್ರೋಲ್ ಬಂಕ್ ಇದರ ಮುಂಭಾಗದ ಲಹರಿ ಡ್ರೈ ಫ್ರೂಟ್ಸ್ ಆ್ಯಂಡ್ ಮೋರ್ ಇದರ ಹನ್ನೊಂದನೇಯ ವಾರ್ಷಿಕೋತ್ಸವ ಪ್ರಯುಕ್ತ ಒಣ ಹಣ್ಣು ಪ್ರಿಯರಿಗೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ.

ಇಷ್ಟು ಮಾತ್ರವಲ್ಲದೇ ಯಾವುದೇ ರೀತಿಯ ಶುಭ ಸಮಾರಂಭಗಳಿಗೆ ವಿಶೇಷ ದರದಲ್ಲಿ ವಿವಿಧ ಬಗೆಯ ಒಣ ಹಣ್ಣುಗಳು , ದೇಶ -ವಿದೇಶಗಳ ವಿವಿಧ ಪ್ಲೇವರ್ ಚಾಕಲೇಟ್ ಗಳು , ಹೆಸರಾಂತ ಬಾಂಬೆ ಕಫೂರ್ ಕುಲ್ಫಿಗಳೆಲ್ಲಾ ಇಲ್ಲಿ ಸದಾ ಸಿಗಲಿದ್ದು , ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವಂತಹ ಸುಂದರವಾದ ಗಿಫ್ಟ್ ಪ್ಯಾಕ್ ಗಳನ್ನು ಕೂಡ ಸಿದ್ಧಪಡಿಸಿ ಕೊಡುವಂತಹ ಸೇವೆಯು ಲಹರಿಯಲ್ಲಿ ಲಭ್ಯವಿದೆ. ಇನ್ನೂ ಹೆಚ್ಚಿನ ಮಾಹಿತಿಗೆ 7624957763 ಸಂಖ್ಯೆ ಸಂಪರ್ಕಿಸುವಂತೆ ಮಾಲೀಕರು ವಿನಂತಿಸಿದ್ದಾರೆ.