
ಪುತ್ತೂರು: ಸವಣೂರು ಗ್ರಾಮದ ಪರಣೆ- ತುಳಸಿಪುರಂನಲ್ಲಿ ಬಿ.ಪದ್ಮಯ್ಯ ಗೌಡ ಪರಣೆ ಮತ್ತು ಹತ್ತು ಸಮಸ್ತರ ಸೇವಾರ್ಥವಾಗಿ ಮಾ.28ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿಯವರಿಂದ ಸಂಜೆ 6ರಿಂದ `ನವಗ್ರಹ ಮಹಾತ್ಮೆ” ಯಕ್ಷಗಾನ ಬಯಲಾಟ ಜರಗಿತು. ರಾತ್ರಿ 7.45ರಿಂದ ಅನ್ನಸಂತರ್ಪಣೆ ನಡೆಯಿತು. ಸಮಾರಂಭದಲ್ಲಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಉದ್ಯಮಿಗಳು ಸೇರಿದಂತೆ ಊರ-ಪರವೂರ ಸಾವಿರಾರು ಮಂದಿ ಭಾಗವಹಿಸಿದ್ದರು.