ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿಯ ವಿದ್ಯಾರ್ಥಿಗಳು ಚಿತ್ರದುರ್ಗದ ನವೋದಯ ಸಂಸ್ಥೆ ಸಂಘಟಿಸಿರುವ ಅಂತರಾಷ್ಟ್ರೀಯ ಮಟ್ಟದ ಗಣಿತ ಪರೀಕ್ಷೆಯಲ್ಲಿ ಇರ್ವತ್ತೂರು ನಿವಾಸಿ ಕೆ.ಎಂ.ಮುಸ್ತಫಾ ಮತ್ತು ಸುಮಯ್ಯ ದಂಪತಿಯ ಪುತ್ರ ಎಂಟನೇ ತರಗತಿಯ ಮುಹಮ್ಮದ್ ಶುಹೈಬ್ ,ಅತ್ತಾಜೆ, ಪಿಲಾತಬೆಟ್ಟು ನಿವಾಸಿ ವೆಂಕಟೇಶ್ ಹೆಗ್ಡೆ ಹಾಗೂ ಶ್ವೇತಾ ದಂಪತಿಯ ಪುತ್ರ 6 ನೇ ತರಗತಿಯ ವಿಕಾಸ್ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ,ಕಿನ್ನಿಬೆಟ್ಟು ಪಡ್ಪು ಹೌಸ್ ನಿವಾಸಿ ರಾಮಕೃಷ್ಣ ಚಂದ್ರಶೇಖರ ಬಜನ್ ಮತ್ತು ಪ್ರಮೀಳಾ ದಂಪತಿಯ ಪುತ್ರಿಯಾದ ಒಂದನೇ ತರಗತಿಯ ಕಾರುಣ್ಯ ಕುಲಾಲ್ , ದರ್ಖಾಸು ನಿವಾಸಿ ಬಾಲಕೃಷ್ಣ ಮತ್ತು ಶಾಂಭವಿ ನಿವಾಸಿ ಜತಿನ್ ಬಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಭಾಗವಹಿಸಿದ ಇತರ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಪದಕ ಪಡೆದಿರುತ್ತಾರೆ. ಬುರೂಜ್ ಶಾಲೆ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತಮ ಮುಖ್ಯ ಶಿಕ್ಷಕಿ ಮತ್ತು ಉತ್ತಮ ಸಂಘಟಕ ಪ್ರಶಸ್ತಿಯು ಲಭಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕ ವೃಂದ ಆಡಳಿತ ಮಂಡಳಿ, ಪೋಷಕರು ಶ್ಲಾಘಿಸಿದ್ದಾರೆ.