‘ಹಿಮ’ದಂತೆ ಕರಗುವ ಮುನ್ನ ‘ಹೇಳಿ ಹೋಗು ಕಾರಣ’ ಇದೊಂದೆ ಪ್ರಾರ್ಥನೆ..

0

ಉತ್ಕಟ ಪ್ರೇಮಕಥೆಯನ್ನು ಒಳಗೊಂಡಂತಹ ಕಥಾ ಹಂದರ ಹೊಂದಿರುವ ಕಾದಂಬರಿ ‘ಹೇಳಿ ಹೋಗು ಕಾರಣ’. ಕಥೆಯ ನಾಯಕನಾದ ಹಿಮವಂತ ಯಾವ ರೀತಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾನೆ. ತೋರಿಕೆಯ ಪ್ರೀತಿ ಇಲ್ಲದೇ, ದೈವಿಕ ಮನಸ್ಸಿನಿಂದ ಪ್ರೀತಿಸಿದ ಹುಡುಗನ ಮನಸ್ಸಿನ ಮುಗ್ದತೆ ಯಾವ ರೀತಿ ಇರುತ್ತದೆ ಎಂಬುದರ ಕುರಿತು ಈ ಪುಸ್ತಕ ವಿವರಿಸುತ್ತಾ ಹೋಗುತ್ತದೆ. ಪ್ರೀತಿ ಅಸಹನೆಯಾಗಿ ಬದಲಾಗುವ, ಮುಗ್ದತೆ ಮೋಸವಾಗಿ ಬದಲಾಗುವ, ಗೊಂದಲ ನಿರ್ಧಾರವಾಗಿ ಬದಲಾಗುವ, ಕನಸುಗಳು ನನಸಾಗಿ ಬದಲಾಗುವ ಮತ್ತು ಸತ್ಯ ಸುಳ್ಳಾಗಿ ಬದಲಾಗುವ ಸಂದರ್ಭಗಳ ಹದವಾದ ಮಿಶ್ರಣವೇ ‘ಹೇಳಿ ಹೋಗು ಕಾರಣ’.

ರವಿ ಬೆಳಗೆರೆಯವರ ಕೈ ಬರಹದಿ ಮೂಡಿಬಂದ ‘ಹೇಳಿ ಹೋಗು ಕಾರಣ’, ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾದಾಗ ಅಪಾರ ಜನಮನ್ನಣೆ ಗಳಿಸಿದಂತಹ ಕಾದಂಬರಿ. ಹಿಮವಂತನ ಮುಗ್ದತೆಯ, ನಿಷ್ಕಲ್ಮಶ ಪ್ರೀತಿಯ ನಡುವೆ ಕನಸು ನನಸಾಗಿಸೋ ಪರಿಶ್ರಮ, ಮೋಸ, ವಂಚನೆ, ಮಾಟ, ಮನೆಗಳ ಪರಿಸ್ಥಿತಿ, ವ್ಯವಸ್ಥೆ, ಹೆಣ್ಣೊಬ್ಬಳು ದಿನಕಳೆದಂತೆ ಬದಲಾಗುವ ಸನ್ನಿವೇಶ, ಹೀಗೆ ಅನೇಕ ಸಂಗತಿಗಳ ಮಿಶ್ರಣವೇ ಈ ಕಾದಂಬರಿ.

ಮನೆ ಬಿಟ್ಟು ಜೀವಕ್ಕೆ ‘ಜೀವ’ವಾಗೋ ಮನದೊಂದಿಗೆ ಹತ್ತಾರು ಮೈಲು ಹೆಜ್ಜೆ ಹಾಕಿದ ಹುಡುಗಿ.. ಆಕೆಯ ಕನಸು ನನಸಾಗಿಸಲು ಆ ‘ಜೀವ’ ಪಟ್ಟ ಪರಿಶ್ರಮ.. ಮೋಸಾ.. ಅಂತ ಬಂದಾಗ ದೇವರಿಗೆ ಮೋಸ ಮಾಡುತ್ತಾರಾ? ಅನ್ನೋ ಮಾತು ಮುಂದೆನಾಗುತ್ತಾದೆ ಎಂಬ ಕುತೂಹಲವನ್ನ ಹೆಚ್ಚಿಸುತ್ತದೆ.. ಪ್ರೀತಿ ಏನೆಲ್ಲಾ ಮಾಡಿಸಬಹುದು. ಮನಗಳಲಿ ಮೂಡುವ ಪ್ರೀತಿ ಬದಲಾಗಬಹುದೇ..? ಯಾವೆಲ್ಲಾ ಕಾರಣಕ್ಕಾಗಿ ಬದಲಾಗಬಲ್ಲದು..? ಬದಲಾಗದೇ ಉಳಿಯುವ ಪ್ರೀತಿ ಎಂದರೆ ಹೇಗಿರುತ್ತದೆ.? ಸೆಳೆತದ ಸುಳಿಯಲ್ಲಿ ಸಿಕ್ಕಿ ನಿದ್ದೆಗೆಡಿಸುವಷ್ಟು ಒದ್ದಾಡುವಂತೆ ಮಾಡುವುದು ಪ್ರೀತಿಯೇ..? ಎನ್ನುವುದಕ್ಕೆ ಒಂದು ರೀತಿಯ ಕನ್ನಡಿಯಾಗುವ ಪುಸ್ತಕ.

ಕಾದಂಬರಿಯಲ್ಲಿ ಬರುವ ಹಿಮವಂತನ ಪ್ರಾರ್ಥನ, ಊರ್ಮಿಳಾ ಮತ್ತು ದೇಬಶಿಶು ಬಂಡೋಪಾಧ್ಯಾಯ ಪಾತ್ರಗಳು, ಹಿಮವಂತನ ಮನಸ್ಸಿಗೆ ಪದೇ ಪದೇ ಕಾಡುವ ಆ ಮಾತೆ ‘ಹೇಳಿ ಹೋಗು ಕಾರಣ’ ಓದುಗರ ಜೀವನಕ್ಕೆ ಸಂಬಂಧಿಸಿದ್ದವೇನೋ ಎಂಬ ಭಾವನೆಯನ್ನು ಹುಟ್ಟು ಹಾಕುತ್ತವೆ. ಪ್ರೀತಿ ಪ್ರೇಮದ ಕಥಾ ಹಂದರದ ಮೇಲೆ ಆಸಕ್ತಿ ಇರುವ ಓದುಗರಿಗೆ ಲಭ್ಯವಿರುವ ಅತ್ಯುತ್ತಮ ಕಾದಂಬರಿಯಿದು. ‘ದೇವರಿಗೆ ಮೋಸಾ ಆಯ್ತಾ..? ದೇವತೆಗೆ ಮೋಸ ಆಯ್ತಾ’ ಅನ್ನೋದು ಓದುಗರ ಮನದಲ್ಲಿ ಮೂಡುವ ಕಡೆಯ ಪ್ರಶ್ನೆ..?

ಅಕ್ಷರ ಪ್ರಿಯರಲ್ಲಿ ಅಚ್ಚಳಿಯಾಗೆ ಉಳಿದ, ಅಕ್ಷರ ಮಾಂತ್ರಿಕ ಎಂದೇ ಖ್ಯಾತರಾದ ಲೇಖಕ, ಪತ್ರಕರ್ತ ವ್ಯಕ್ತಿ ರವಿ ಬೆಳಗೆರೆ. ಮಾ.15 1958ರಲ್ಲಿ ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿ ಜನಿಸಿದ ರವಿ ಅವರು ಸಾಹಿತ್ಯ ಲೋಕದಲ್ಲಿ ಹೊಸತನವನ್ನು ಕನ್ನಡಿಗರಿಗೆ ನೀಡಿದವರು. ಪ್ರಾಧ್ಯಾಪಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ರವಿ ಬಳಿಕ ಸಾಹಿತ್ಯ ಲೋಕಕ್ಕೆ ಧುಮುಕಿ ಭಾವನಾ ಪ್ರಕಾಶನದ ಮೂಲಕ, ಹಾಯ್‌ ಬೆಂಗಳೂರು ಮೂಲಕ ಜನಮಾನಸ ಗೆದ್ದವರು. ಈ ಅಕ್ಷರ ಮಾಂತ್ರಿಕನ ಕೈಯಲ್ಲಿ ಮೂಡಿಬಂದ, 334 ಪುಟಗಳನ್ನೊಳಗೊಂಡ, ವಿಶೇಷವಾಗಿ ಪ್ರೇಮಿಗಳಿಗೆಂದೆ ರಚಿತವಾದ ಪುಸ್ತಕವೇ ʼಹೇಳಿ ಹೋಗು ಕಾರಣʼ.

ಹಾಗಾದ್ರೆ ಇನ್ಯಾಕೆ ತಡ..! ಕೆಳಗೆ ಕೊಟ್ಟಿರುವ ಲಿಂಕ್ (Link) ಮೂಲಕ ಪುಸ್ತಕವನ್ನು ಇಂದೇ ಆರ್ಡರ್ (Order) ಮಾಡಿ… (So why wait any longer..! Order the book you are interested in reading today through the link given below)👇👇 

https://shorturl.at/vlgVf

LEAVE A REPLY

Please enter your comment!
Please enter your name here