ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಆರ್ಯಾಪು ಮಹಾಶಕ್ತಿಕೇಂದ್ರದ ಶಕ್ತಿ ಕೇಂದ್ರ ಪ್ರಮುಖರ ಸಭೆ ಮಾ.29ರಂದು ಬಿಜೆಪಿ ಕಛೇರಿಯಲ್ಲಿ ನಡೆಯಿತು.
ಪಕ್ಷ ಸಂಘಟನೆ ಹಾಗೂ ಮುಂದೆ ನಡೆಯುವ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸಭಾಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಸಂಜೀವ ಮಠಂದೂರು, ಪಕ್ಷದ ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಮಂಡಲ ಪ್ರದಾನ ಕಾರ್ಯದರ್ಶಿ ಉಮೇಶ ಕೋಡಿಬೈಲು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಬಿ.ಎಸ್., ಪ್ರದಾನ ಕಾರ್ಯದರ್ಶಿ ನಾಗೇಶ್ ಟಿ.ಎಸ್. ಕೆಮ್ಮಾಯಿ, ಪುರುಷೋತ್ತಮ ಮುಂಗ್ಲಿಮನೆ, ಶಕ್ತಿಕೇಂದ್ರ ಪ್ರಮುಖರಾದ ಪ್ರಜ್ವಲ್ ಘಾಟೆ ಆರ್ಯಾಪು, ಪ್ರೇಮ್ ರಾಜ್ ಆರ್ಲಪದವು, ವಿರೂಪಾಕ್ಷ ಭಟ್ ಮಚ್ಚಿಮಲೆ, ವಿನಯ ಕಲ್ಲೆಗ, ಸುಬ್ರಹ್ಮಣ್ಯ ಬಲ್ನಾಡು, ಮುರಳಿಕೃಷ್ಣ ಹಸಂತಡ್ಕ, ಅಭಿಜಿತ್ ಕೊಡಿಪ್ಪಾಡಿ, ನವೀನ್ ಪಡ್ನೂರು, ಸಂದೀಪ್ ರೈ ಬೆಟ್ಟಂಪಾಡಿ, ನಿತೇಶ್ ಬಲ್ನಾಡು, ದಿವ್ಯ ಪುರುಷೋತ್ತಮ, ಜಯಶ್ರೀ ಪಾಣಾಜೆ ಇವರು ಉಪಸ್ಥಿತರಿದ್ದರು.