ಮಹೀಂದ್ರಾ XEV 9e ಎಲೆಕ್ಟ್ರಿಕ್ ಕಾರು ಜಿಲ್ಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ : ಪ್ರಥಮ ಖರೀದಿದಾರರಾಗಿ ಉದ್ಯಮಿ ಕುಂಬ್ರದ ಆಶಿಕುದ್ದೀನ್ ಅಖ್ತರ್

0

ಪುತ್ತೂರು: ಮಹೀಂದ್ರಾ ಕಂಪೆನಿಯ XEV 9e ಎಲೆಕ್ಟ್ರಿಕ್ ಕಾರು ಮಾ.29ರಂದು ಮಂಗಳೂರು ಶೋರೂಂನಲ್ಲಿ ಬಿಡುಗಡೆಗೊಂಡಿದ್ದು ಪಿಎಂಕೆ ಕನ್‌ಸ್ಟ್ರಕ್ಷನ್‌ನ ಮಾಲಕ ಆಶಿಕುದ್ದೀನ್ ಅಖ್ತರ್ ಕುಂಬ್ರ ಅವರು ಕಾರು ಖರೀದಿಸುವ ಮೂಲಕ ದ.ಕ ಜಿಲ್ಲೆಯ ಪ್ರಥಮ ಗ್ರಾಹಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕರ್ನಾಟಕ ಏಜೆನ್ಸೀಸ್ ಮಂಗಳೂರು ಇದರ ಸಿ ಇ ಒ ರಿಚರ್ಡ್ ರೋಡ್ರಿಗಸ್ ಕಾರಿನ ಕೀ ಹಸ್ತಾಂತರಿಸಿದರು.


ಜಿಲ್ಲೆಯಲ್ಲಿ ಸದ್ಯಕ್ಕೆ ಒಟ್ಟು 10 ಕಾರು ಬಿಡುಗಡೆಗೊಂಡಿದ್ದು ಈ ಕಾರಿನ ಬೆಲೆ ರೂ. 36 ಲಕ್ಷ ಆಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here