ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಕಕ್ಕೂರು ನಿವಾಸಿ ಕೂಲಿ ಕಾರ್ಮಿಕ ಕುಂಞಣ್ಣ ನಾಯ್ಕ ಬೇರಿಕೆ (80 ವ) ಎಂಬವರು ಮಾ.29ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಆರೋಗ್ಯವಂತರಾಗಿದ್ದು ಬೆಳಿಗ್ಗೆ ಶೌಚಾಲಯ ಹೋಗಿ ಬರುವಾಗ ಆಕಸ್ಮಿಕವಾಗಿ ಬಿದ್ದ ಇವರನ್ನು ರೆಂಜ ಕ್ಲಿನಿಕ್ ತಂದಾಗ ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದರು. ಇವರು 8 ವರ್ಷಗಳ ಹಿಂದೆ ಕುಟುಂಬದ ಜತೆ ತಿರುಪತಿ ಯಾತ್ರೆ ಹೋದ ಸಂದರ್ಭದಲ್ಲಿ ತಪ್ಪಿ ಹೋಗಿ ಸುಮಾರು 6 ತಿಂಗಳ ನಂತರ ಮನೆಗೆ ಮರಳಿದ್ದರು.
ಮೃತರು ಪತ್ನಿ ಕಮಲ,ಪುತ್ರರಾದ ಬಟ್ಯ ನಾಯ್ಕ,ವಾಮನ ನಾಯ್ಕ,ಗೋವಿಂದ ನಾಯ್ಕ ಹಾಗೂ ಪುತ್ರಿಯರಾದ ಪುಷ್ಪಲತಾ, ಗಿರಿಜಾ, ಭಾಗೀರಥಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.