ಪುತ್ತೂರು: ಮೈಸೂರಿನ ಕಲಾಮಂದಿರದಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ನಡೆದ ‘ಅಶ್ವಥ್ 100’ ಕಾರ್ಯಕ್ರಮದಲ್ಲಿ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರನ್ನು ಸನ್ಮಾನಿಸಿದರು.
ಅಶ್ವಥ್ ಅವರ ದ್ವಿತೀಯಾರ್ಧದ ಬದುಕಿನಲ್ಲಿ ವಿಶೇಷವಾದ ಪಾತ್ರವಹಿಸಿದ್ದಕ್ಕಾಗಿ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಮತ್ತು ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅವರು ಜಂಟಿಯಾಗಿ ಗಣೇಶ್ ಕಾಸರಗೋಡು ಅವರನ್ನು ಆಯ್ಕೆ ಮಾಡಿ ಈ ಸನ್ಮಾನವನ್ನು ನೀಡಿದರು.
ಹಿರಿಯ ನಟ ಶ್ರೀನಾಥ್, ದೊಡ್ಡಣ್ಣ, ಕುಮಾರ ಬಂಗಾರಪ್ಪ, ಗಿರಿಜಾ ಲೋಕೇಶ್, ಟೀವಿ9 ರಂಗನಾಥ ಭಾರದ್ವಾಜ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಣೇಶ್ ಕಾಸರಗೋಡು ಅವರನ್ನು ಸನ್ಮಾನಿಸಿದರು.