ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ

0

ಪುತ್ತೂರು: ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 3 ವರ್ಷಗಳಿಂದಲೂ ಹಿಂದೂ ಧಾರ್ಮಿಕ ಶಿಕ್ಷಣ ಪ್ರತಿ ಸೋಮವಾರ ನಡೆಯುತ್ತಿದ್ದು, ಇನ್ನು ಮುಂದೆ ಧಾರ್ಮಿಕ ಶಿಕ್ಷಣ ಮಕ್ಕಳಿಂದ ಹಾಗೂ ಮಕ್ಕಳ ಮಾತೆಯರಿಂದ ಪ್ರತೀ ಶನಿವಾರ ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ ಇದರ ಪ್ರಾರಂಭ ಮಾ.29 ರಂದು ದೇವಳದಲ್ಲಿ ನಡೆಯಿತು.


ದೇವಳದ ಪ್ರಧಾನ ಅರ್ಚಕರಾದ ವೆ/ಮೂ ವಸಂತ ಕೆದಿಲಾಯರು ಹಾಗೂ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ರವರು ಶುಭ ಹಾರೈಸಿದರು.ನಿಕಟ ಪೂರ್ವ ಅಧ್ಯಕ್ಷ ಕೇಶವಪ್ರಸಾದ್ ಮುಳಿಯರವರು ದೀಪ ಬೆಳಗಿಸಿ ಮಕ್ಕಳಲ್ಲಿ ಧಾರ್ಮಿಕತೆ ಬೆಳೆಸುವ ನಿಟ್ಟಿನಲ್ಲಿ ಭಜನೆಯ ಮಹತ್ವದ ಬಗ್ಗೆ ತಿಳಿಸಿದರು.


ಧಾರ್ಮಿಕ ಶಿಕ್ಷಣದ ಸಂಪನ್ಮೂಲ ವ್ಯಕ್ತಿಗಳಾದ ಡಾ ವಿಜಯ ಸರಸ್ವತಿ,ಚಂದ್ರಪ್ರಭ , ಕೃಷ್ಣವೇಣಿ ಮುಳಿಯ, ಪ್ರಶಾಂತ್ ದೊಡ್ಡಡ್ಕ , ಪ್ರಭಾವತಿ ಉಪಸ್ಥಿತರಿದ್ದರು,ನಂತರ ಮಕ್ಕಳಿಂದ ಹಾಗೂ ಮಾತೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here