ಪುತ್ತೂರು: ಪಿ. ತಿಮ್ಮಪ್ಪ ಗೌಡ(Retired inspector) ಅವರ ಪತ್ನಿ ಸುಮಿತ್ರಾ ಅವರು ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ಮಾರ್ಚ್ 30 ರಂದು ನಿಧನರಾದರು.
ಶಿಕ್ಷಣ ಕ್ಷೇತ್ರದಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸುಮಿತ್ರಾ ಅವರು ತಮ್ಮ ವೃತ್ತಿ ಜೀವನವನ್ನು ಬಳ್ಪ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಆರಂಭಿಸಿದರು. ಬಳಿಕ ಮಂಗಳೂರಿನ ಟೆಂಪ್ಲ್‌ವರ್ಡ್ ಶಾಲೆಯಲ್ಲಿ ಅಧ್ಯಾಪನ ನಡೆಸಿ, ನಂತರ ಮೊಟ್ಟೆತ್ತಡ್ಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು. ಮೃತರು ಮೂಲತಃ ಪರೆಂಕಿಲ್ಲು ಕುರಿಯ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಸಂಪತ್ ಸದನದಲ್ಲಿ ವಾಸ್ತವ್ಯವಿದ್ದರು.
ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಅಪಾರ ಬಂಧುಮಿತ್ರರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತರು ಪತಿ ಪಿ. ತಿಮ್ಮಪ್ಪ ಗೌಡ, ಪುತ್ರ ಗಣೇಶ್ ಪಿಟಿ, ಪುತ್ರಿ ಡಾ. ಕಲಾವತಿ, ಸೊಸೆ ಡಾ. ನೀತಾ, ಅಳಿಯ ಪ್ರವೀಣ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.