ಅಣಬೆ ಮಾರಾಟದ ಬದಲು ಅದರಿಂದ ಉತ್ಪನ್ನ ತಯಾರಿಸಿ ಮಾರ್ಕೆಟಿಂಗ್ ಮಾಡಿ: ಗಿರೀಶ್ವರ್ ಭಟ್
ಪುತ್ತೂರು: ಕೃಷಿಯಲ್ಲಿ ಜನಾಸಕ್ತಿ ಹೆಚ್ಚುತ್ತಿರುವ ನಡುವೆ ಅರಿವು ಕೃಷಿ ಕೇಂದ್ರದ ವತಿಯಿಂದ ನಡೆದ ಅಣಬೆ ಕೃಷಿ ತರಬೇತಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿದೆ.
ಮಾ.30 ರಂದು ಅರಿವು ಕೃಷಿ ಕೇಂದ್ರದಲ್ಲಿ ಅಣಬೆ ಕೃಷಿ ತರಬೇತಿ ನಡೆದಿದ್ದು, ತರಬೇತಿದಾರರಾಗಿ ಆಗಮಿಸಿದ ಗಿರೀಶ್ವರ ಭಟ್ ಅವರು ಅಣಬೆ ಕೃಷಿ ಮಾಡುವ ವಿಧಾನ, ಅಣಬೆ ಬೀಜ ಹಾಗೂ ಮಾರ್ಕೆಟಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಅಲ್ಲದೆ ಅಣಬೆ ಕೃಷಿ ಮಾಡಿದ ನಂತರ ಅಣಬೆ ಮಾರಾಟ ಮಾಡುವ ಬದಲು ಅಣಬೆಯಿಂದ ಮಾಡಬಹುದಾದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು. ಈ ವೇಳೆ ಆಸಕ್ತರು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮಲ್ಲಿದ್ದ ಅಣಬೆ ಕೃಷಿಯಲ್ಲಿನ ಗೊಂದಲಗಳನ್ನು ಪರಿಹರಿಸಿಕೊಂಡರು.
ಈ ವೇಳೆ ಆಶಲತಾ ಕೃಷ್ಣನಗರ, ಭಾಗ್ಯಜ್ಯೋತಿ ಬೆಟ್ಟಂಪಾಡಿ, ಶೋಭಿತ್ ಕಡಬ, ಮೋಹನ್ ಆಲಂಕಾರು, ನಿತಿನ್ ಪುತ್ತೂರು, ವಸಂತ್ ರೈ ಪಾಣಾಜೆ, ಪ್ರಮೋದ್ ನಾರಾಯಣ್ ಸೂತ್ರಬೆಟ್ಟು, ಕೇಶವ ಪೈ ದರ್ಬೆ, ಲತೀಫ್ ಉಜಿರೆ, ಮೋಹನ್ ಕುಮಾರ್ ಕೌಡಿಚ್ಚಾರ್, ರಿಯಾಜ್ ಪುತ್ತೂರು, ವೀಣಾ ರಾವ್ ಉಪ್ಪಿನಂಗಡಿ, ರಾಜೇಶ್ ಕೆಸಿ ಉದನೆ, ಸಾನ್ವಿತ್ ಟಿ ರೈ ಪಾಣಾಜೆ, ವಿಠಲ್ ತಿಂಗಳಾಡಿ, ಸಾತ್ವಿಕ್ ಕಾಣಿಯೂರು, ನಿತಿನ್ ಎನ್ ಕೆ ಅಜ್ಜಿನಡ್ಕ, ರಂಜಿತ್ ಅಜ್ಜಿನಡ್ಕ, ಪದ್ಮಯ್ಯ ಗೌಡ ಹಿರೆಬಂಡರಿ, ಶರತ್ ಪಿಎಂ ಆಲಂಕಾರು, ಶೋಭಾ ಮಂಗಳೂರು ತರಬೇತಿ ಪಡೆದರು. ಈ ವೇಳೆ ಚೈತ್ರ ಮಧುಚಂದ್ರ ಸ್ವಾಗತಿಸಿ ವಂದಿಸಿದರು, ಹರಿಣಾಕ್ಷಿ ಮತ್ತು ರಕ್ಷಾ ಸಹಕರಿಸಿದರು.
ಮಿಲ್ಕಿ ಅಣಬೆ ಬೀಜ ಬೇಕಾದಲ್ಲಿ ಬುಕ್ಕಿಂಗ್ಗಾಗಿ ಅರಿವು ಕೃಷಿ ಕೇಂದ್ರ 6364570738, 8050293990 ಸಂಪರ್ಕಿಸಿ.